Big News
Trending

Ganesh Festival: ಪೊಲೀಸ್ ಠಾಣೆಯಲ್ಲಿ ಅದ್ಧೂರಿ ಗಣೇಶೋತ್ಸವ: ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ

ಭಟ್ಕಳ: ಇಲ್ಲಿನ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ಅತೀ ವಿಜೃಂಭಣೆಯಾಗಿ ಇಲ್ಲಿನ ನಗರ ಠಾಣೆ ಆವರಣದಲ್ಲಿ ಗಣೇಶೋತ್ಸವವನ್ನು (Ganesh Festival) ಆಯೋಜಿಸಿದ್ದು ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ 5 ದಿನಗಳ ನಗರ ಠಾಣೆಯ ಆವರಣದಲ್ಲಿ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಜೊತೆಗೂಡಿ ಗಣೇಶ ಹಬ್ಬವನ್ನು ಆಚರಿಸಿದರು. ಮೂರನೇ ದಿನದಂದು ಒಂದು ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಹೊರಗಿನಿಂದ ಯಾವುದೇ ದೇಣಿಗೆ ಸಂಗ್ರಹಿಸದೇ ನಗರ ಹಾಗೂ ಗ್ರಾಮೀಣ ಪೊಲೀಸ ಠಾಣೆಯ ಸಿಬ್ಬಂದಿಗಳೇ ಅನ್ನ ಸಂತರ್ಪಣೆ ಖರ್ಚು ವೆಚ್ಚಗಳನ್ನು ವ್ಯಯಿಸಿ ಭಕ್ತರಿಗೂ ಮತ್ತು ಸಾರ್ವಜನಿಕರಿಗೆ ಅನ್ನ ದಾನ ಸೇವೆಯನ್ನು ನೀಡಿದ್ದಾರೆ. ಈ ರೀತಿ ಆಚರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಲ್ಲಿ ( Ganesh Festival) ಮಾತ್ರ ಕಾಣಸಿಗುತ್ತದೆ. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ವಿಷ್ಣುವರ್ಧನ್ ಹಿರಿಯ ಹೆಚ್ಚುವರಿ ನ್ಯಾಯಧೀಶ ಕುರಾನಿ ಕಾಂತ್ ಠಾಕೂ, ಜೆ.ಎಂ.ಎಫ್.ಸಿ ಪ್ರಧಾನ ನ್ಯಾಯಾಧೀಶ ವಿನೋದ ಬಾಳ ನಾಯ್ಕ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪ್ರತಿ ವರ್ಷ ಭಟ್ಕಳ ಪೊಲೀಸ ಇಲಾಖೆಯಿಂದ ನಡೆಯುವ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಉಸ್ತುವಾರಿಯನ್ನು ಎ.ಎಸ್.ಐಗಳಾದ ನವೀನ ಬೋರ್ಕರ್, ಗೋಪಾಲ ನಾಯ್ಕ, ರಾಮಚಂದ್ರ ವೈದ್ಯ , ವಿನೋದ ನಾಯ್ಕ ಹಾಗೂ ಇತರರು ವಹಿಸಿಕೊಂಡಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button