Awareness Program: ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ
ಕುಮಟಾ: ಮಾದಕ ದ್ರವ್ಯ ಸೇವನೆ ಅಪಾಯಕಾರಿಯಾಗಿದ್ದು ಅದು ಯುವ ಜನತೆಯನ್ನು ಆಕರ್ಷಿಸುತ್ತಿರುವುದು ದು ರರ್ದೃಷ್ಟಕರ ಎಂದು ಕುಮಟಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಯುತ ನವೀನ್ ಎಸ್ ನಾಯ್ಕ ನುಡಿದರು. ಅವರು ಕುಮಟಾ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನ ಇಲಾಖೆ ಪೊಲೀಸ್ ಇಲಾಖೆ ಡಾ. ಏ ವಿಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ವನ್ನು ಡಾ. ಏ ವೀ ಬಾಳಿಗಾ ಮಹಾವಿದ್ಯಾಲಯದಲ್ಲಿಏರ್ಪಡಿಸಲಾಗಿತ್ತು. ಅವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ರೀಮತಿ ಜೊಯ್ಲಿನ್ ಮೇನ್ಡಡೋ ನಃ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಾಲಯ ದಂಡಾಧಿಕಾರಿಗಳು ಕುಮಟಾ ಅವರು “ವಿದ್ಯಾರ್ಥಿಗಳ ದುಶ್ಚಟಗಳಿಂದ ದೂರವಿರಬೇಕು ಗುರಿಯ ಕಡೆಗೆ ಸಾಗಬೇಕು ಎಂದರು.” ಪ್ರಾಚಾರ್ಯ ಶ್ರೀಮತಿ ವೀಣಾ ಕಾಮತ್ ಅವರು “ನಮ್ಮ ಮಕ್ಕಳು100% ದುಶ್ಚಟ ಗಳಿಂದ ದೂರವಿದ್ದಾರೆ . ಇದನ್ನು ನಾನು ಆತ್ಮ ವಿಶ್ವಾಸ ದಿಂದ ಹೇಳಬಲ್ಲೆ” ಎಂದರು.
ಅಧ್ಯಕ್ಷ ತೆ ವಹಿಸಿದ್ದ ಮಮತಾ ನಾಯ್ಕ್ ಅಧ್ಯಕ್ಷರು ವಕೀಲರ ಸಂಘ ಕುಮಟಾ “ಹದಿಹರೆಯದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು” ಎಂದರು. ವೇದಿಕೆ ಮೇಲೆ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀ ಅಣ್ಣಪ್ಪ ನಾಯಕ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಸಿದರು. ಕೊನೆಯಲ್ಲಿ ಉಪನ್ಯಾಸಕರಾದ ಮಹಾಬಲೇಶ್ವರ ಅಂಬಿಗ ವಂದಿಸಿದರು.
ವಿಸ್ಮಯ ನ್ಯೂಸ್, ಕುಮಟಾ