ಗೋಕರ್ಣ: ಇದೇ ಸೆಪ್ಟೆಂಬರ್ 27, 28 ಮತ್ತು 29 ರಂದು ಭವ್ಯ ಭಾರತಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಸಂಕಲ್ಪದೊoದಿಗೆ ಮಹಾರುದ್ರ ಯಾಗ (Maharudra Yaga) ಪರಶಿವನ ಆತ್ಮಲಿಂಗ ಇರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣಕಾಶಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ (Gokarna) ಧಾರ್ಮಿಕ ವಿಧಿವಿಧಾನದಂತೆ ಆರಂಭಗೊoಡಿದೆ. ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಮತ್ತು ಇನ್ನೊಮ್ಮೆ ಈ ದೇಶದ ಪ್ರಧನಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಈ ಮಹಾಸಂಕಲ್ಪ ಸೇವೆಯನ್ನು ಪ್ರಾರಂಭಿಸಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಮಹಾರುದ್ರ ಯಾಗವು ಪ್ರಾರಂಭಗೊoಡಿದ್ದು, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ ಶಿರಸಿ ಇದರ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆ ಅವರ ಪಾಲ್ಗೊಳ್ಳುವಿಕೆಯಲ್ಲಿ ವೈದಿಕರು ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಸಂಬoಧ ವೈಧಿಕರಾದ ಕೃಷ್ಣ ಭಟ್ ಷಡಕ್ಷರಿ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾಭಲೇಶ್ವರನ ಸೇವೆ ಮಾಡಿದರೆ ಯಾವ ಕಾಮನೆಯನ್ನು ಇಟ್ಟುಕೊಂಡು ಸೇವೆ ಮಾಡುತ್ತಾರೋ ಆ ಕಾಮನೆಯು ಸಿದ್ಧಿಯಾಗುತ್ತದೆ ಎಂಬುದು ಪ್ರತೀತಿ.
ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಮತ್ತು ಇನ್ನೊಮ್ಮೆ ಈ ದೇಶದ ಪ್ರಧನಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆಅನಂತಮೂರ್ತಿ ಹೆಗಡೆ ಅವರು ಮಹಾರುದ್ರ ಯಾಗವನ್ನು ಹಮ್ಮಿಕೊಂಡಿದ್ದಾರೆ ಎನ್ನುತ್ತಾ ಮಹಾರುದ್ರ ಯಾಗದ (Maharudra Yaga) ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ ಅವರು, ಭಗವಾನ್ ಈಶ್ವರನ ಸಾಕ್ಷಾತ್ ಆತ್ಮಲಿಂಗ ಇರುವ ಈ ಸ್ಥಳದಲ್ಲಿ ಭವ್ಯ ಭಾರತಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಸಂಕಲ್ಪದೊoದಿಗೆ ಮಹಾರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ದೇಶವನ್ನು ವಿಶ್ವಗುವನ್ನಾಗಿಸಿದ ಧೀಮಂತ ನಾಯಕರಾದ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರದಾನಿಯಾಗಬೇಕು .
ಹಾಗೂ ಭಗವಂತನು ಅವರಿಗೆ ಪರಿಪೂರ್ಣವಾದ ಆಯುಷ್ಯ ಹಾಗೂ ಆರೋಗ್ಯವನ್ನು ಕರುಣಿಸಲಿ ಎಂಬುದೆ ಈ ಮಹಾರುದ್ರ ಯಾಗದ ಮುಖ್ಯ ಉದ್ದೇಶ ಎಂದು ಮಾಹಿತಿ ನೀಡಿದರು. ಈ ವೇಳೆ ಹೆಚ್ಚಿನ ಸಂಖ್ಯೆಯ ವೈಧಿಕರು, ಬಿಜೆಪಿ ಮುಖಂಡರಾದ ಕುಮಾರ್ ಮಾರ್ಕೆಂಡೆ ಅವರು ಸೇರಿದಂತೆ ಹಲವು ಭಜಕ-ಭಕ್ತರು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ