ಕಾರವಾರ: ಜಿಲ್ಲಾ ಮೀಸಲು ಪೊಲೀಸ್ ವಿಭಾಗದಲ್ಲಿ ಎ.ಆರ್.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಾರವಾರ ಕಾಜುಬಾಗ ನಿವಾಸಿ
ಜಯರಾಮ ಚಂದ್ರು ನಾಯ್ಕ ( 67) ಅವರು ನಿಧನರಾದರು. ಸುಮಾರು 39 ವರ್ಷಗಳ ಸುದೀರ್ಘ ಕಾಲ ಪೊಲೀಸ್ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸಿ, ತಮ್ಮ ಸರಳ ಸಜ್ಜನಿಕೆಯ ಸ್ವಭಾವದಿಂದ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.
ಮೃತರು, ಪತ್ನಿ ಜಯಶ್ರೀ ನಾಯ್ಕ, ಪುತ್ರರಾದ ಸಾಯಿನಾಥ, ಕೃಷ್ಣಾನಂದ, ಜಗದೀಶ್, ಮಾರುತಿ, ಸೊಸೆಯಂದಿರು ,ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ತೊರೆದಿದ್ದಾರೆ. ಕಾರವಾರ ಡಿ. ಆರ್ ಪೊಲೀಸ್ ವಿಭಾಗದ ಅಧಿಕಾರಿ ಓರ್ವರು, ಸ್ಥಳೀಯ ಪ್ರಮುಖರು, ಬಂಧು ಬಳಗದವರು ಸೇರಿ ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ