ಕುಮಟಾ: ರೆಸಾರ್ಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಸಂತ್ರಸ್ಥ ಯುವತಿಯರನ್ನು ರಕ್ಷಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಹೌದು, ತಾಲೂಕಿನ ಹೊಲನಗದ್ದೆ, ಬಾಡ, ಅಘನಾಶಿನಿ ಮುಂತಾದ ಭಾಗದಲ್ಲಿ ಇದೀಗ ಯೇತೇಚ್ಚವಾಗಿ ರೆಸಾರ್ಟ್, ಹೋಮ್‌ಸ್ಟೇ ಮುಂತಾದವುಗಳು ತಲೇ ಎತ್ತಿ ನಿಂತಿದ್ದು, ಪ್ರವಾಸೋದ್ಯಮದ ಉದ್ದೇಶದಿಂದ ಇದು ಉತ್ತಮ ಬೆಳವಣಿಗೆಯಾಗಿದೆ. ಅದರೆ ಇಂತಹ ರೆಸಾರ್ಟ್ ಹಾಗೂ ಹೋಮ್‌ಸ್ಟೇ ಗಳಲ್ಲಿ ಅಕ್ರಮ ಚಟುವಟಿಕೆಗಳು ಅತಿಯಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ತಾಲೂಕಿನ ಬಾಡ ಗ್ರಾಮದ ಜೇಷ್ಠಪುರದ ರೆಸಾರ್ಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಭಟ್ಕಳ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ, ಬೆಂಗಳೂರು ಮತ್ತು ಕೊಲ್ಕತ್ತಾ ಮೂಲದ ಇಬ್ಬರು ಸಂತ್ರಸ್ತ ಯುವತಿಯರ ರಕ್ಷಣೆ ಮಾಡಲಾಗಿದೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಸಾರ್ಟ್ ಮಾಲೀಕರು, ಮಂಗಳೂರು ಮೂಲದ ನಾಗೇಶ ಶೆಟ್ಟಿ ಎಂಬುವವರಿಗೆ ರೆಸಾರ್ಟ್ ನಡೆಸಲು ಕೊಟ್ಟಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡು, ಆರೋಪಿಗಳು,. ತಮ್ಮ ಲಾಭಕ್ಕೊಸ್ಕರ ಬೇರೆ ಬೇರೆ ಸ್ಥಳಗಳಿಂದ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಕರೆಯಿಸಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಮೇರೆಗೆ ಭಟ್ಕಳ ಡಿವೈಎಸ್ಪಿ ಶ್ರೀಕಾಂತ ನೇತೃತ್ವದ ತಂಡ ದಾಳಿ ನಡೆಸಿ ರೇಸಾರ್ಟ್ಲ್ಲಿದ್ದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
ಅಂತೆಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗೇಶ ಶೆಟ್ಟಿ ಮತ್ತು ಅರೀಫ್ ಮುಲ್ಲಾ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಈ ದಾಳಿಯಲ್ಲಿ ದೊರೆತ ನಗದು, ಮೊಬೈಲ್ ಸೇರಿದಂತೆ ಒಟ್ಟು 37 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ