ಗೋಕರ್ಣ: ಇಲ್ಲಿನ ಕಡಲತೀರದಲ್ಲಿ ಇಳಿದು ಜೀವಕ್ಕೆ ಅಪಾಯ ತಂದಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಪ್ರವಾಸಕ್ಕೆ ಬಂದ ವೇಳೆ ಒಂದೇ ಕುಟುಂಬದ ಏಳು ಪ್ರವಾಸಿಗರು ನೀರಿನಲ್ಲಿ ಇಳಿದಿದ್ದು, ಈ ವೇಳೆ ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. ಕೂಡಲೇ ಜೀವ ರಕ್ಷಕ ಪಡೆ ಯುವಕರು ಏಳು ಮಂದಿಯ ಪ್ರಾಣವನ್ನು ರಕ್ಷಿಸಿದ್ದಾರೆ.
ಹುಬ್ಬಳ್ಳಿಯ ಕುಟುಂಬವೊoದು ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ಈ ವೇಳೆ ಎಲ್ಲರೂ ನೀರಿಗೆ ಇಳಿದು ಆಟವಾಡುತ್ತಿರುವಾಗ, ಮುಳುಗಿ ಹೋಗುವ ಭಯದಲ್ಲಿದ್ದರು. ಈ ವೇಳೆ ಕಾರ್ಯಾಚರಣೆಗಿಳಿದ ಲೈಫ್ ಗಾರ್ಡ್ಗಳು, ಎಲ್ಲ ಏಳು ಪ್ರವಾಸಿಗರನ್ನು ಅಪಾಯದಿಂದ ಪಾರು ಮಾಡಿ, ಜೀವ ರಕ್ಷಿಸಿದ್ದಾರೆ. ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರ ತಂಡದಲ್ಲಿದ್ದ ಪರಶುರಾಮ(44), ಅಕ್ಷರ(14), ರುಕ್ಮಿಣಿ (38), ಧೀರಜ್ (14), ಖುಷಿ (13), ದೀಪಿಕಾ (12), ನಂದಕಿಶೋರ (10) ರಕ್ಷಣೆಗೊಳಗಾದ ಪ್ರವಾಸಿಗರು.
ಇದೇ ವೇಳೆ, ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿಯನ್ನು ಸಹ ರಕ್ಷಣೆ ಮಾಡಲಾಗಿದೆ. ಪಿಂಡ ಪ್ರಧಾನ ಮಾಡಲು ಬಂದಿದ್ದ ಹುಬ್ಬಳ್ಳಿಯ ಎಲ್ ವಿ ಪಾಟೀಲ್ (30) ರಕ್ಷಣೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಎಲ್ ವಿ ಪಾಟೀಲ್ , ನೀರಿನಲ್ಲಿ ಮುಗಳುತ್ತಿರುವುದನ್ನು ಗಮನಿಸಿದ ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ ಎಂಬುವವರು ಕೂಡಲೇ ಸಮುದ್ರಕ್ಕೆ ಜಿಗಿದು ರಕ್ಷಣೆ ಮಾಡಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ