ಕಾರವಾರ: ಸೀಬರ್ಡ್ ನಿರಾಶ್ರಿತರ ಕಾಲೋನಿಯ ಮನೆಯೊಂದರ ಕೋಳಿ ಗೂಡಿಗೆ ನುಗ್ಗಿ, ಅಲ್ಲಿದ್ದ ಕೋಳಿಗಳನ್ನು ಹೆಬ್ಬಾವೊಂದು ನುಂಗಿತ್ತು. ಈ ವೇಳೆ ಹೆಬ್ಬಾವು ತಾನು ನುಂಗಿದ್ದ ಕೋಳಿಗಳನ್ನು ಹೊರಹಾಕುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಆಹಾರವನ್ನರಸಿ ಇಲ್ಲವೇ ಇನ್ನಿತರೇ ಕಾರಣಳಿಂದ ವನ್ಯ ಜೀವಿಗಳು ಆಗಾಗ ಜನವಸತಿ ಪ್ರದೇಶಕ್ಕೆ ಬರುತ್ತಿದ್ದು ಸ್ಥಳೀಯರು ಆತಂಕ ಗೊಳ್ಳುವಂತೆ ಮಾಡುತ್ತವೆ.
ಹವಾಮಾನ ವೈಪರೀತ್ಯ, ಚತುಷ್ಪಥ ಹೆದ್ದಾರಿ, ಹಳ್ಳ-ಕೊಳ್ಳಗಳ ನೀರಿನ ಹರಿವು ಮತ್ತಿತರ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಹೆಬ್ಬಾವು ಕಂಡು ಬರುತ್ತಿದೆ. ಅದೇ ರೀತಿ ಕಾರವಾರ ತಾಲೂಕಿನ ತೊಡೂರು ಗ್ರಾಮದ ಸೀಬರ್ಡ್ ನಿರಾಶ್ರಿತರ ಕಾಲೊನಿಯ ಮನೆಯೊಂದರ ಕೋಳಿ ಗೂಡಿಗೆ ಹೆಬ್ಬಾವೊಂದು ನುಗ್ಗಿದೆ. ರಾತ್ರಿ ಬೆಳಗಾಗುವುದರೊಳಗೆ ಗೂಡಿನಲ್ಲಿದ್ದ ಒಂದು ಕೋಳಿ ಸತ್ತು ಬಿದ್ದಿದ್ದರೆ ಉಳಿದ ಕೋಳಿಗಳು ಶಬ್ದ ಮಾಡದೇ ನಾಪತ್ತೆಯಾಗಿದ್ದವು. ಆತಂಕ ಗೊಂಡ ಮನೆಯವರು ಕೋಳಿ ಗೂಡಿನ ಬಾಗಿಲು ಸರಿಸಿದಾಗ ಹೆಬ್ಬಾವು ಅವಿತುಕೊಂಡಿರುವುದು ನೋಡಿ ಆತಂಕಗೊoಡಿದ್ದಾರೆ.
ನಂತರ ತಮ್ಮ ಪರಿಚಿತರ ಮೂಲಕ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಇವರಿಗೆ ಪೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ , ಹೆಬ್ಬಾವಿನ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಅಪರೂಪದ ದೃಶ್ಯಾವಳಿಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ ಒಂದರ ನಂತರ ಒಂದರoತೆ ತಾನು ನುಂಗಿದ್ದ ಒಟ್ಟೂ ಮೂರು ಕೋಳಿಗಳನ್ನು ಹೆಬ್ಬಾವು ಹೊರಕಕ್ಕಿದೆ.
ತಾವು ಸಾಕಿದ್ದ ಕೋಳಿಗಳಲ್ಲಿ ಮೂರನ್ನು ನುಂಗಿದ್ದ ಹೆಬ್ಬಾವು, ಮತ್ತೊಂದನ್ನು ಸಾಯಿಸಿರುವುದನ್ನು ಕಂಡ ಮನೆ ಯಜಮಾನ ಚಂದ್ರು ನಾಗಪ್ಪ ಆಗೇರ, ಕೋಳಿ ಮಾರಾಟದಿಂದ ತಮ್ಮ ಕುಟುಂಬದ ಕೈ ಸೇರಬೇಕಾದ ಅಲ್ಪ ಆದಾಯವೂ ಕೈಗೆ ಸಿಗದಿರುವ ಬಗ್ಗೆ ನಿರಾಶೆ ಹಾಗೂ ದುಃಖದಿಂದ ಹೆಬ್ಬಾವಿನಿಂದ ತಮಗಾದ ನಷ್ಟದ ಕುರಿತು ಮನದಾಳದ ನೋವು ತೋಡಿಕೊಂಡತಿತ್ತು.
ಈ ವೇಳೆ ಮಾತನಾಡಿದ ಮಹೇಶ ನಾಯ್ಕ, ನಿರಾಶ್ರಿತರ ಕಾಲೊನಿ ಹಲವು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ. ಅಂತೆಯೇ ವನ್ಯ ಜೀವಿಗಳು ಮತ್ತು ಮಾನವ ಸಂಘರ್ಷಕ್ಕೆ ನಾವೆಲ್ಲ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಹೆಬ್ಬಾವನ್ನು ಹಿಡಿದು ಸಂರಕ್ಷಿಸಿ ಸ್ಥಳೀಯರ ಆತಂಕ ದೂರ ಮಾಡಿದ ಮಹೇಶ ನಾಯ್ಕ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ಮಾತು ಕೇಳಿ ಬಂದಿದೆ. ಹರಿಶ್ಚಂದ್ರ ನಾಯ್ಕ ಹಟ್ಟಿಕೇರಿ, ನಾಗರಾಜ ನಾಯ್ಕ ತೊಡೂರು ಮತ್ತು ಸ್ಥಳೀಯರು ಹೆಬ್ಬಾವು ಸಂರಕ್ಷಣೆಗೆ ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ