ಇಸ್ರೇಲ್ ನಲ್ಲಿದ್ದಾರೆ ಭಟ್ಕಳದ 40ಕ್ಕೂ ಅಧಿಕ ಜನರು : ಸದ್ಯ ಎಲ್ಲರೂ ಸುರಕ್ಷಿತ

ಭಟ್ಕಳ: ಹಮಾಸ್ ಎಂಬ ಭಯೋತ್ಪಾದಕ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ಹಾಗೂ ಕ್ಷೀಪಣಿಗಳ ಮಳೆಗೈದಿದ್ದ ಹಿನ್ನೆಲೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದು ಸದ್ಯಕ್ಕೆ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಛೇರಿಯು ಮುಂದಾಗಿದೆ. ಇಸ್ರೇಲ್ ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರು ಸುರಕ್ಷಿತವಾಗಿದ್ದು, ಸದ್ಯ ಎಲ್ಲರು ಕುಟುಂಬಸ್ಥರ ಜೊತೆಗೆ ಸಂಪರ್ಕದಲ್ಲಿದ್ದು ನಿಟ್ಟುಸಿರು ಬಿಡುವಂತಾಗಿದೆ.

ಉದ್ಯೋಗದ ನಿಮಿತ್ತ ಇಸ್ರೇಲನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರು ಸದ್ಯ ಭಾರತೀಯ ರಾಯಭಾರಿ ಕಚೇರಿಯಿಂದ ಸಂಪರ್ಕಕ್ಕೆ ಸಿಕ್ಕಿದ್ದು ಸದ್ಯ ಎಲ್ಲರು ಕುಟುಂಬದವರೊoದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಯಾವ ಕ್ಷಣದಲ್ಲಿ ಏನಾಗುತ್ತದೊ ಎಂಬ ಭಯ ಕುಟುಂಬಸ್ಥರನ್ನು ಕಾಡುತ್ತಿದೆ. ಭಟ್ಕಳದ ಮುಂಡಳ್ಳಿ ಭಾಗದ 12 ಮಂದಿ ಹಾಗೂ ಮುರುಡೇಶ್ವರ ಬಸ್ತಿ ಚರ್ಚ ಕಾಸ್ರ ಬಳಿಯ 29 ಮಂದಿ ಇಸ್ರೇಲನಲ್ಲಿ ನೆಲೆಸಿದ್ದಾರೆ.

ಸದ್ಯ ಕನ್ನಡಿಗರೆಲ್ಲರು ಒಂದು ವಾಟ್ಸಾಪ್ ಗ್ರೂಪ ಮಾಡಿದ್ದು ನಾವೆಲ್ಲರು ನಿರಂತರ ಸಂಪರ್ಕದಲ್ಲಿದ್ದು ಸುರಕ್ಷಿತರಾಗಿದ್ದೇವೆ ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಪ್. ಗೋಮ್ಸ ಮತ್ತು ಡಾಲ್ಪಿ ಗೋಮ್ಸ ಅವರು ತಮ್ಮ ಅನುಭವ ತಿಳಿಸಿದ್ದಾರೆ. ‘ಇಸ್ರೇಲನಲ್ಲಿ ನಡೆದ ರಾಕೆಟ್ ದಾಳಿಯ ಬಗ್ಗೆ ತಿಳಿದು ಒಂದು ಕ್ಷಣಕ್ಕೆ ನಮ್ಮ ಮಕ್ಕಳ ಪರಿಸ್ಥಿತಿಯ ಬಗ್ಗೆ ಭಯ ಉಂಟಾಯಿತು.

ಆ ತಕ್ಷಣಕ್ಕೆ ಅವರನ್ನು ವಿಡಿಯೋ ಕಾಲ್ ಮೂಲಕ ಅವರನ್ನು ಸಂಪರ್ಕಿಸಿದಾಗ ನಾವಿಬ್ಬರು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿ ಬಳಿಕ ನಮಗೆ ಸಮಾಧಾನವಾಯಿತು. ಅಲ್ಲಿಂದ ಇಲ್ಲಿಯ ತನಕ ನಾವು ನಿರಂತರ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಪರಿಸ್ಥೀತಿ ಬಗ್ಗೆ ಕೇಳುತ್ತಿದ್ದೇವೆ. ಸ್ಥಳಿಯ ಪೋಲೀಸರು ಸಹ ನಮ್ಮನ್ನು ಹಾಗೂ ಕುಟುಂಬದವರನ್ನು ನಿತ್ಯವೂ ಸಂಪರ್ಕಿಸುತ್ತಿದ್ದು, ಭಾರತೀಯ ರಾಯಭಾರಿ ಕಛೇರಿಗೆ ನಾವೆಲ್ಲರು ಧನ್ಯವಾದ ತಿಳಿಸಿಲಿದ್ದೇವೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version