Snake Bite: ಹಾವು ಹಿಡಿಯುವ ವೇಳೆ ಕಡಿದ ನಾಗರಹಾವು: ಉರಗರಕ್ಷಕ ಗಂಭೀರ

ಹೊನ್ನಾವರ: ನಾಗರಹಾವು ಹಿಡಿಯಲು ತೆರಳಿದ್ದ ಉರಗತಜ್ಞನಿಗೆ ಕಾರ್ಯಾಚರಣೆ ವೇಳೆ ನಾಗರಹಾವು ಕಚ್ಚಿದ (Snake Bite) ಘಟನೆ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಉರಗ ತಜ್ಞ ಗಂಭೀರವಾಗಿ ಅಸ್ವಸ್ಥನಾಗಿದ್ದಾನೆ ಎಂದು ತಿಳಿದುಬಂದಿದೆ. ಅಬು ತಲಾ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ. ಗಾಯಾಳುವನ್ನು ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಹಾವು ಹಿಡಿಯುವ ವೇಳೆ ಹಾವು ಅಚಾನಕ್ಕಾಗಿ ಕಡಿದಿದ್ದು, ಆದರೂ ಕಾರ್ಯಾಚರಣೆ ನಿಲ್ಲಿಸದೆ ಹಾವು ಹಿಡಿದಿದ್ದರು. ಆದರೆ, ಹಾವು ಕಡಿತದಿಂದ ಇವರ ಸ್ಥಿತಿ ಗಂಭೀರವಾಗಿದೆ.

ಹಾವನ್ನು ಹಿಡಿಯುವಾಗ ದಿಡೀರ್ ಕೈ ಭಾಗಕ್ಕೆ ಹಾವು ಕಚ್ಚಿದೆ. ಆದರು ಹಾವನ್ನು ಹಿಡಿದ್ದಾರೆ. ನಂತರ  ತಾಲೂಕ ಆಸ್ಪತ್ರೆಗೆ ಕರೆದೊಯ್ದರು ಸ್ಥಿತಿ ಗಂಭೀರವಾಗಿರುವುದರಿಂದ ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದ್ದು, ಗುಣಮುಖ ಆಗಲಿ ಎಂದು ತಾಲೂಕಿನ ಜನತೆಯು ಪ್ರಾರ್ಥಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version