ಭಟ್ಕಳ: ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಯುವಕನೊರ್ವ ಚಿಕಿತ್ಸೆಗೆ ಸ್ಪಂದಿಸದೆ ಇರುವ ಹಿನ್ನೆಲೆ ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರುವ ವೇಳೆ ಯುವಕ ಸಾವನ್ನಪಿರುವ ಘಟನೆ ನಡೆದಿದೆ. ತಲಗೋಡ ನಿವಾಸಿ ಪ್ರಜ್ವಲ ಖಾರ್ವಿ ಮೃತ ಯುವಕ ಎಂದು ತಿಳಿದುಬಂದಿದೆ. ಈತ ಸಾಗರ ಶ್ರೀ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಾಗಿದ್ದು, ಕಳೆದ ಒಂದು ವಾರದಿಂದ ಡೆಂಗ್ಯು ಜ್ವರದಿಂದ ಬಳಲುತ್ತಿದ್ದ.
ಅಕ್ಟೋಬರ್ 19 ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದಾಗ ಯುವಕ ತೀವ್ರ ಜ್ವರದಿಂದ ಬಳಲುತ್ತಿದ್ದು , ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ 2 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಯುವಕ ಯಾವುದೇ ಚಿಕಿತ್ಸೆ ಸ್ಪಂದಿಸದೆ ಇರುವ ಕಾರಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಅಲ್ಲಿಯೂ ಕೂಡ ಚಿಕಿತ್ಸೆಗೆ ಸ್ಪಂದಿಸದೆ ಇರುವ ಕಾರಣ ಯುವಕನನ್ನು ಅಲ್ಲಿಂದ ಡಿಸ್ಚಾರ್ಜ್ ಮಾಡಲಾಗಿದ್ದು ಅಲ್ಲಿಂದ ಭಟ್ಕಳ ಬರುವ ವೇಳೆ ಯುವಕ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಜೂನ್ ,ಜುಲೈನಿಂದ ತಿಂಗಳಲ್ಲಿ ಬಂದರ ಧಕ್ಕೆ ಸುತ್ತಮುತ್ತಲಿನ ಸ್ವಚ್ಛತೆಗಾಗಿ ಟೆಂಡರ್ ಕರೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಬಂದರ ಮೀನುಗಾರಿಕೆ ಸೊಸೈಟಿ ಈ ಟೆಂಡರ್ ಪಡೆದಿದ್ದರೆ, ಮೀನುಗಾರಿಕೆ ಇಲಾಖೆ ಟೆಂಡರ್ ಹಸ್ತಾಂತರ ಮಾಡದೆ ಇರುವ ಕಾರಣ ಧಕ್ಕೆ ಸುತ್ತಮುತ್ತ ಸ್ವಚ್ಛತ್ತೆ ಇಲ್ಲದ ಕಾರಣ ನೀರು ನಿಂತು ಗಬ್ಬು ನಾರುತ್ತಿತ್ತು .
ಇದರಿಂದ ಆ ಭಾಗದಲ್ಲಿ ಹೆಚ್ಚು ಡೆಂಗ್ಯು ಪ್ರಕರಣ ಕಂಡು ಬಂದಿದ್ದು, ಸದ್ಯ ಓರ್ವ ಯುವಕ ಸಾವನ್ನಪ್ಪಿದ್ದರೆ ಮೇಲ್ನೋಟಕ್ಕೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇದಕ್ಕೆ ಸಂಬoಧಿಸಿದ ಆರೋಗ್ಯ ಇಲಾಖೆ ಬಂದರ ಸುತ್ತಮುತ್ತ ಪರಿಶೀಲಿಸಿ ಆ ಭಾಗದಲ್ಲಿ ಮತ್ತಷ್ಟು ಡೆಂಗ್ಯು ಪ್ರಕರಣ ಇದೆ ಎನ್ನುವುದು ಪತ್ತೆಹಚ್ಚ ಬೇಕಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ