ಭಟ್ಕಳ: ತಾಲೂಕಿನ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯು ಜ್ವರದಿಂದ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ರಮೇಶ ರಾವ್ (ಡಿ.ಎಂ.ಓ) ಬಂದರ ಸುತ್ತ ಮುತ್ತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಮೊದಲು ಭಟ್ಕಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಸೂಚಿಸಿದರು.
ಈ ವ್ಯಾಪ್ತಿಯಲ್ಲಿ ಬರುವ 1,172 ಮನೆಗಳು ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ 3 ದಿನಗಳೊಳಗಾಗಿ ಸರ್ವೇ ಕಾರ್ಯ ಮುಗಿಸಿಬೇಕು. ಜೊತೆಯಲ್ಲಿ ಮನೆಗಳಿಗೆ ತೆರಳಿ ವೇಳೆ ಸ್ವಚ್ಛತೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ನಿಂತ ಕೊಳಚೆ ನೀರಿಗೆ ಔಷಧಿ ಸಿಂಪಡಿಸುವoತೆ ಸೂಚಿಸಿದರು.
ಬಳಿಕ ಸಭೆ ಮುಗಿಸಿ ನೇರ ತಾಲೂಕಿನ ಆರೋಗ್ಯ ಇಲಾಖೆ ತಂಡದೊoದಿಗೆ ಮಾವಿನ ಕುರ್ವೆ ಧಕ್ಕೆಗೆ ತೆರಳಿ ಸಣ್ಣ ಸಣ್ಣ ಚರಂಡಿಯಲ್ಲಿ ನಿಂತ ನೀರಿಗೆ ಔಷಧಿ ಸಿಂಪಡಿಸಿದರು .ಅಲ್ಲದೆ, ಬಂದರ ಬೀಚ್ ಗೆ ತೆರಳುವ ರಸ್ತೆ ಪಕ್ಕದಲ್ಲಿ ಕುಡಿಯಲು ಯೋಗ್ಯವಲ್ಲದ ಬಾವಿಯ ಪಕ್ಕದಲ್ಲಿ ನೀರು ನಿಂತು ದುರ್ವಾಸನೆ ಬಿರುತ್ತಿರುದನ್ನು ಗಮನಿಸಿದ ಅವರು ತಕ್ಷಣ ಸ್ಥಳೀಯ ಪಂಚಾಯತಗೆ ಬಾವಿಯನ್ನು ಮುಚ್ಚುವಂತೆ ಪತ್ರ ಬರೆಯಲು ಸೂಚಿಸಿದರು.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಭಟ್ಕಳದಲ್ಲಿ ಕಳೆದ ಹಲವಾರು ದಿನಗಳಿಂದ ನಗರ ಪ್ರದೇಶಗಳಲ್ಲಿ ಶಂಕಿತ ಡೆಂಗ್ಯು ಪ್ರಕರಣ ಪತ್ತೆಯಾದ ಹಿನ್ನೆಯಲ್ಲಿ ಆರೋಗ್ಯ ಇಲಾಖೆಯಿಂದ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅವೆಲ್ಲವುಗಳನ್ನು ಮಾಡಲಾಗಿದೆ.
ಶಂಕಿತ ಪ್ರಕರಣದಲ್ಲಿ ಯುವಕನೊರ್ವ ಸಾವನ್ನಪ್ಪಿದ್ದು ಇದನ್ನು ನಮ್ಮ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಕಳೆದ 2014 ರಲ್ಲಿಯೂ ಕೂಡ ಬಂದರಲ್ಲಿ 80ಕ್ಕೂ ಅಧಿಕ ಡೆಂಗ್ಯು ಪ್ರಕರಣ ಪತ್ತೆಯಾಗಿತ್ತು ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ ಆದರೆ ಮತ್ತೆ ಈಗಲೂ ಅದೇ ಪ್ರದೇಶದಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯದಿಂದ ನೀರು ನಿಲ್ಲುವ ಪ್ರದೇಶಗಲ್ಲಿ ನೀರು ಹರಿದು ಹೋಗುವಂತೆ ಮಾಡಲು ಸೂಚಿಸುತ್ತೇವೆ ಎಂದು ತಿಳಿದರು.
ಇದೆ ವೇಳೆ ಮಾವಿನಕುರ್ವೆ ಪಂಚಾಯತ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೆ ಇರುವ ಹಿನ್ನೆಯಲ್ಲಿ ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಸವಿತಾ ಕಾಮತ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿಗಳು ಮತ್ತು ಸ್ಥಳೀಯ ಮುಖಂಡರಾದ ರಮೇಶ ಖಾರ್ವಿ, ಗೋವಿಂದ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ