ಕುಮಟಾ: ಆಟವಾಡುತ್ತಿದ್ದಾಗ ಮಗುವೊಂದು ಆಕಸ್ಮಿಕವಾಗಿ ಮನೆ ಅಂಗಳದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಶೋಕನಮಕ್ಕಿಯಲ್ಲಿ ನಡೆದಿದೆ. ಐದು ವರ್ಷದ ಪುಟಾಣಿ ಧೃತಿ ನಾರಾಯಣ ಪಟಗಾರ ಎಂಬಾಕೆಯೇ ಮೃತಪಟ್ಟಿರುವ ಬಾಲಕಿ ಎಂದು ತಿಳದುಬಂದಿದೆ. ಈಕೆ ತಾಯಿ ಬಾಳಂತನದಲ್ಲಿ ಇರುವ ಕಾರಣದಿಂದ ತನ್ನ ತಾಯಿಯ ಅಕ್ಕನ ಮನೆಗೆ ಬಂದಿದ್ದಳು.
ಹೌದು, ತಾಯಿಯ ಬಾಳಂತನವೆoದು ದೊಡ್ಡಮ್ಮನ ಮನೆಗೆ ಬಂದ ಐದು ವರ್ಷದ ಮಗು ಆಟವಾಡುತ್ತಿದ್ದಾಗ ಬಿದ್ದಿದ್ದು, ಈ ವೇಳೆ ತಲೆಗೆ ಗಾಯವಾಗಿ ದುರಂತ ಸಂಭವಿಸಿದೆ. ಮೃತ ಬಾಲಕಿ ಮೂಲತಃ ಹಿರೇಗುತ್ತಿಯವಳು. ತಲೆ ಮತ್ತು ಹಣೆಗೆ ಬಿದ್ದ ಬಲವಾದ ಪೆಟ್ಟಿನಿಂದ ಬಾಲಕಿ ಪ್ರಜ್ಞಾಹೀನ ಸ್ಥಿತಿಗೆ ತೆರಳಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿರುವ ವೇಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ.
ವಿಸ್ಮಯ ನ್ಯೂಸ್, ಕುಮಟಾ