ಜೋಯ್ಡಾ: ಜಿಂಕೆಗಳ ಕೋಡನ್ನು ಮನೆಯಲ್ಲಿ ಇರಿಸಿಕೊಂಡ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಿಂಕೆಯ ಕೋಡನ್ನು ವಶಪಡಿಸಿಕೊಂಡ ಘಟನೆ ಜೋಯ್ಡಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವನನ್ನು ಬಂಧಿಸಿಸಲಾಗಿದೆ. ಶಿವಾಜಿ ವೃತ್ತದ ಹತ್ತಿರ ಇರುವ ಮನೆಯೊಂದರಲ್ಲಿ ಎರಡು ಜಿಂಕೆಗಳ ಕೋಡು ಪತ್ತೆಯಾಗಿದ್ದು, ಹುಲಿ ಉಗುರು ಇರುವುದರ ಬಗ್ಗೆ ಕೂಡಾ ಮಾಹಿತಿ ಲಭ್ಯವಾಗಿದೆ. ಪ್ರಕಾಶ್ ನಾಯ್ಕ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್