Follow Us On

Google News
Big News
Trending

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಶಿರಸಿ: ಮರಾಠಿಕೊಪ್ಪದ ಸಮೀಪ ಎರಡನೇ ಕ್ರಾಸ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಸಾವಿಗೀಡಾದ ಮಂಗವೊoದಕ್ಕೆ ಹಾಲು ಹಾಕಿ, ಅರಿಶಿಣ ಕುಂಕುಮ ಹಚ್ಚಿ , ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ. ವಿದ್ಯುತ್ ಕಂಬದ ಸಮೀಪ ಜಿಗಿಯುವಾಗ ಮಂಗಕ್ಕೆ ವಿದ್ಯುತ್ ತಾಗಿ, ಅಲ್ಲಿಯೇ ಸತ್ತು ಹೋಗಿತ್ತು. ಸುದ್ದಿ ತಿಳಿದ ಹೆಸ್ಕಾಂನವರು ವಿದ್ಯುತ್ ಸ್ಥಗಿತಗೊಳಿಸಿ ಸತ್ತ ಮಂಗನನ್ನು ಕೆಳಕ್ಕೆ ಹಾಕಿದ್ದಾರೆ. ಈ ವೇಳೆ, ಜನರು ಮಂಗನಿಗೆ ಭಕ್ತಿಯಿಂದ ನಮಿಸಿ ಪೂಜೆ ಹಾಗೂ ಇತ್ಯಾದಿ ಕಾರ್ಯಗಳನ್ನು ನೆರವೇರಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button