ಕುಮಟಾ: ಕುಮಟಾ ಶಿರಸಿ ಹೆದ್ದಾರಿ ( Sirsi Kumta Road) ಬಂದ್ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಪಷ್ಟಪಡಿಸಿದ್ದಾರೆ. ಕುಮಟಾದಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು, ಕುಮಟಾ ಶಿರಸಿ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ. ಈ ರಸ್ತೆಯನ್ನು ಬಂದ್ ಮಾಡುವುದರಿಂದ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ.
ರಸ್ತೆಯ ಪಕ್ಕದಲ್ಲೇ ವಾಹನ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ( Sirsi Kumta Road) ರಸ್ತೆ ಕಾಮಗಾರಿಯನ್ನು ಮಾಡಬೇಕು ಎಂದು ಆದೇಶ ಮಾಡಿದರು. ಈ ಕುರಿತು ಒಂದು ಆದೇಶವನ್ನೇ ಹೊರಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆ ಕಾಮಗಾರಿ ಕಾರಣದಿಂದ ನವೆಂಬರ್ 1 ರಿಂದ 2024, ಮೇ 31ರ ವರೆಗೆ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ಶಿರಸಿ ಸಹಾಯಕ ಆಯುಕ್ತರು ಪ್ರಕಟಣೆ ನೀಡಿದ್ದರು. ಆದರೆ, ಉಸ್ತುವಾರಿ ಸಚಿವರ ಆದೇಶದಿಂದ ಕುಮಟಾ- ಶಿರಸಿ ರಸ್ತೆಯಲ್ಲಿ ಈ ಮೊದಲಿನಂತೆಯೇ ವಾಹನ ಸಂಚಾರ ನಡೆಯುವ ಸೂಚನೆ ಸಿಕ್ಕಿದೆ.
ವಿಸ್ಮಯ ನ್ಯೂಸ್, ನಾಗೇಶ್ ದಿವಗಿ ಕುಮಟಾ