Follow Us On

WhatsApp Group
Big News
Trending

ಡಿಸೆಂಬರ್ 9 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್: ಪೂರ್ವಭಾವಿ ಸಭೆ

ಅಂಕೋಲಾ: ಬರುವ ಡಿಸೆಂಬರ್ 9 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತನ್ನಿಮಿತ್ತ ಜೆ.ಎಂ. ಎಫ್ ಸಿ ನ್ಯಾಯಾಧೀಶರ ಘನ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ ಪೂರ್ವ ಭಾವಿ ಸಭೆ ಕರೆಯಲಾಗಿತ್ತು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ವಿವಿಧ ನ್ಯಾಯಾಲಯಗಳಲ್ಲಿ ಡಿಸೆಂಬರ್ 9 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಇದೇ ವೇಳೆ ಅಂಕೋಲಾದಲ್ಲಿ ಸಹ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಲೋಕ ಅದಾಲತ್ ಕಾರ್ಯಕ್ರಮದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಡೆದುಕೊಳ್ಳಬೇಕು ಎಂದು ಅಂಕೋಲಾ ಜೆ.ಎಂ.ಎಫ್. ಸಿ ಹಿರಿಯ ನ್ಯಾಯಾಧೀಶ ಮನೋಹರ ಎಂ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿವಿಧ ಇಲಾಖೆ, ಮತ್ತಿತರರ ಉಪಸ್ಥಿತಿಯಲ್ಲಿ ನವೆಂಬರ್ 8 ರ ಶನಿವಾರ ಮಧ್ಯಾಹ್ನ ಅಂಕೋಲಾ ನ್ಯಾಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ,ಮಾಹಿತಿ ನೀಡಿದ ಅವರು, ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಸಿವಿಲ್ ಮತ್ತು ರಾಜಿ ಆಗಲು ಅರ್ಹವಿರುವ ಕ್ರಿಮಿನಲ್ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಮೋಟಾರ್ ವಾಹನಗಳ ಪರಿಹಾರಕ್ಕೆ ಸಂಬಂಧಿಸಿದ ಹಾಗೂ ಇತರೆ ವ್ಯಾಪ್ತಿಯಲ್ಲಿ ನ ನಾನಾ ಪ್ರಕರಣಗಳು, ಚೆಕ್ ಬೌನ್ಸ್, ಜೀವನಾಂಶದ ಪ್ರಕರಣಗಳು, ಪುರಸಭೆ,ತಾ.ಪಂ, ಅರಣ್ಯ ಇಲಾಖೆ, ಅಬಕಾರಿ ಮತ್ತಿತರ ಇಲಾಖಾ ವ್ಯಾಪ್ತಿಯ ತೆರಿಗೆ ಬಾಕಿ ಪ್ರಕರಣ, ಕಳ್ಳಸಾಗಾಣಿಕೆ ಪ್ರಕರಣ, ಕಂದಾಯ ಇಲಾಖೆಗೆ ಸಂಬಂಧಿಸಿದ ಪುಕರಣಗಳು ಸೇರಿ ಎಲ್ಲ ರೀತಿಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು, ಜನರಲ್ಲಿ ಜನತಾ ನ್ಯಾಯಾಲಯದ ಕುರಿತು ಅರಿವು ಮೂಡಿಸುವ ಕೆಲಸ ನಡೆಯಬೇಕು, ಇದಕ್ಕೆ ಜನರ ಮತ್ತು ಸಂಬಂಧಿತ ಇಲಾಖೆ ಹಾಗೂ ಇತರರ ಸಹಕಾರ ಅಗತ್ಯ ಎಂದು ಹೇಳಿದ ಅವರು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಆಗುವ ಪ್ರಕರಣಗಳ ನ್ಯಾಯಾಲಯದ ಶುಲ್ಕವನ್ನು ಸಹ ಮರಳಿ ನೀಡಲಾಗುವುದು ವ್ಯಾಜ್ಯಗಳು ಬಾಕಿ ಇರುವ ಜನರು ಹೆಚ್ಚಿನ ಪ್ರಮಾಣದಲ್ಲಿ ಲೋಕ ಅದಾಲತ್ ಮೂಲಕ ಪ್ರಕರಣ ಬಗಹರಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ, ಸಾಂಧರ್ಭಿಕವಾಗಿ ಮಾತನಾಡಿ ಅದಾಲತ್‌ನ ಮಹತ್ವ ವಿವರಿಸಿ,ಸಮಯ ಹಾಗೂ ಹಣದ ಉಳಿತಾಯದಂತ ಪ್ರಯೋಜನಗಳನ್ನು . ಪಡೆದುಕೊಳ್ಳುವಂತೆ ಕರೆನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ ಬೆಲ್ಲದ ಘನ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ ಲಕ್ಷ್ಮೀ ಪಾಟೀಲ, ಪ್ರಭಾರಿ ಸಿಡಿಪಿಓ ಸವಿತಾ ಶಾಸ್ತ್ರೀಮಠ,
ಉಪ ತಹಶೀಲ್ದಾರ ಗಿರೀಶ ಜಾಂಬವಳಿಕರ, ಅಬಕಾರಿ ಇಲಾಖೆಯ ಅಧಿಕಾರಿ ಮಧುರಾ ದಾಸ್, ತಾ.ಪಂ, ಪುರಸಭೆ, ಪೋಲೀಸ್ ಮತ್ತಿತರೆ ಇಲಾಖೆಗಳ ಕೆಳ ಹಂತದ ಅಧಿಕಾರಿಗಳು ಹಾಜರಿದ್ದರು. ಎಪಿಪಿ ಗಿರೀಶ್ ಪಟಗಾರ, ಶಿಲ್ಪಾ ನಾಯ್ಕ, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ವಕೀಲರಿದ್ದರು.ವಕೀಲರಾದ ಗುರು ನಾಯ್ಕ ಸ್ವಾಗತಿಸಿದರು. ನೋಟರಿ ಸಂಘದ ಜಿಲ್ಲಾಧ್ಯಕ್ಷ ನಾಗನಂದ ಬಂಟ ವಂದಿಸಿದರು.

ನವೆಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನಿಮಿತ್ತ ತಾಲೂಕಿನ ಒಟ್ಟೂ 21 ಗ್ರಾಪಂ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ವಿವಿಧ ಇಲಾಖೆಗಳ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಮತ್ತಷ್ಟು, ಕಾನೂನಿನ ಅರಿವು ನೆರವು ಮತ್ತು ಜಾಗೃತಿ ಮಾಡಿಸಲು ತಿಳಿಸಲಾಯಿತು. ಹಿರಿ-ಕಿರಿಯ ವಕೀಲರು, ಸ್ವಯಂ ಸೇವಕರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button