ಗೋಕರ್ಣದ ಫಾರ್ಮ್ ಹೌಸ್‌ವೊಂದರಲ್ಲಿ ವೇಶ್ಯಾವಾಟಿಕೆ: ಮೂವರ ಬಂಧನ

ಗೋಕರ್ಣ: ಕುಮಟಾ ತಾಲೂಕಿನ ಗೋಕರ್ಣದ ಫಾರ್ಮ್ ಹೌಸ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಯುವತಿಯರನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ, ಮೈಸೂರು ಹಾಗೂ ಚಿತ್ರದುರ್ಗದಿಂದ ಯುವತಿಯರನ್ನು ಕರೆತಂದಿದ್ದ ಪತಿ ಹಾಗು ಪತ್ನಿ ಹಾಗು ಓರ್ವ ಸ್ಥಳೀಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

SBI Recruitment 2023: ಬೃಹತ್ ಉದ್ಯೋಗಾವಕಾಶ: 5,447 ಹುದ್ದೆಗಳಿಗೆ ನೇಮಕಾತಿ: Apply Now

ಹೌದು, ಇಲ್ಲಿನ ಕಾಮತ್ ಫಾರ್ಮ ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಪಿಐ ವಸಂತ ಆಚಾರಿ ನೇತೃತ್ವದ ತಂಡವು ಮೂವರು ಯುವತಿಯನ್ನ ರಕ್ಷಣೆ ಮಾಡಿದೆ. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ ಇತ್ತಿಚೆಗೆ ಜೋರಾಗಿದೆ ಎಂಬ ಆರೋಪದ ಬೆನ್ನಲ್ಲೆ, ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್, ಗೋಕರ್ಣ

Exit mobile version