ಕಾರವಾರ: ಈ ವರ್ಷ ಮಳೆಯ ಕೊರತೆ ಕಾರಣ ಭೂಮಿಯ ಮೇಲಿನ ಬೆಳೆಹಾನಿ ಸಮಸ್ಯೆ ಒಂದೆಡೆಯಾದರೆ ಅತ್ತ ಸಮುದ್ರದಲ್ಲೂ ಆತಂಕ ಶುರುವಾಗಿದೆ. ಮಳೆಯು ಸರಿಯಾಗಿ ಸುರಿಯದ ಕಾರಣ ಮತ್ಸöಕ್ಷಾಮ ಆರಂಭಗೊAಡಿದ್ದು, ಇದರಿಂದಾಗಿ ಮತ್ಸೊöÃದ್ಯಮ ಅವಲಂಬಿತ ಲಕ್ಷಾಂತರ ಮಂದಿ ದಿಗಿಲುಗೊಳ್ಳುವಂತಾಗಿದೆ. ಅಲ್ಲದೇ ಮುಂದಿನ ನಾಲ್ಕಾರು ತಿಂಗಳು ಮೀನಿಗೆ ತೀವೃ ಬರ ಎದುರಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಕಾಲ. ಈ ವೇಳೆ ಮಳೆ ನೀರಿನೊಂದಿಗೆ ಆಹಾರವೂ ಸಮುದ್ರ ಸೇರುತ್ತದೆ. ಆದರೆ ಮುಂಗಾರು ಕ್ಷೀಣಗೊಂಡಿದ್ದಲ್ಲದೇ, ಮೀನು ಸಂತತಿ ದಡದ ಬಳಿಗೆ ಬರಲು ಪೂರಕವಾಗುವಂತೆ ಸಮುದ್ರ ಮಂಥನವಾಗದಿರುವುದು ಮತ್ಸöಕ್ಷಾಮಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇಂತಹ ಪ್ರತಿಕೂಲ ಹವಾಮಾನದಿಂದ ಎಲ್ಲೆಡೆ ಮೀನಿನ ಲಭ್ಯತೆ ಕಡಿಮೆಯಾಗಿದೆ. ಹಿಂಗಾರು ಮಳೆ ಮುಗಿದ ಬಳಿಕ ಮತ್ತೆ ಸರಿಯಾಗಬುದು ಎನ್ನುವ ಎಣಿಕೆಯಿದೆಯಾದರೂ ಋತುವಿನ ಆರಂಭದಲ್ಲಿ ಚಂಡಮಾರುತ, ಮಳೆಯಿಂದಾಗಿ ಅಡ್ಡಿಯಾಗಿದ್ದರೆ ಈಗ ಮಳೆ ಪರಿಸ್ಥಿತಿ ತಕ್ಕ ಮಟ್ಟಿಗೆ ಅನುಕೂಲವಿಲ್ಲದ್ದರೂ ಮೀನೇ ಸಿಗದ ಪರಿಸ್ಥಿತಿ ಎದುರಾಗಿದೆ. ಮೀನಿನ ಬರದಿಂದಾಗಿ ಮಾರುಕಟ್ಟೆಗಳಲ್ಲಿ ಎಲ್ಲ ವಿಧದ ಮೀನಿನ ದರವೂ ದುಬಾರಿಯಾಗಿದೆ.
ಜೂನ್, ಜುಲೈನಲ್ಲಿ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ಸ್ಥಗಿತದ ಬಳಿಕ ಆಗಸ್ಟ್ನಿಂದ ಮೀನು ಹೇರಳವಾಗಿ ಸಿಗುವ ಕಾಲ. ಅದರಲ್ಲೂ ಅಕ್ಟೋಬರ ಡಿಸೆಂಬರ್ ವರೆಗೆ ಯಥೇಚ್ಚವಾಗಿ ಮೀನುಗಳು ಸಿಗುವ ಸಮಯ. ಆದರೆ ಈ ಅವಧಿಯಲ್ಲೇ ಮತ್ಸಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಆತಂಕಕ್ಕೆ ತಳ್ಳಿದೆ.
ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್