ತಾ.ಪಂ. ಮಾಜಿ ಸದಸ್ಯ ಬೀರಾ ಗೌಡ ವಿಧಿವಶ: ಜನಾನುರಾಗಿ ಮುಖಂಡನ ಅಕಾಲಿಕ ನಿಧನಕ್ಕೆ ಗಣ್ಯರ ಸಂತಾಪ

ಅಂಕೋಲಾ : ತಾಲೂಕಿನ ಬೆಳಸೆ ಗ್ರಾ.ಪಂ. ವ್ಯಾಪ್ತಿಯ ಶಿರೂರು ಗ್ರಾಮದ ಬೀರಾ ಭೈರು ಗೌಡ (52) ಡಿ. 3ರಂದು ತಮ್ಮನ್ನು ಕಾಡುತಿದ್ದ ಅನಾರೋಗ್ಯದಿಂದ ಅಕಾಲಿಕವಾಗಿ ವಿಧಿವಶರಾದರು.ತಾಲೂಕು ಪಂಚಾಯಿತಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ಅತ್ಯುತ್ತಮ ಕ್ರೀಡಾಪಟುವಾಗಿ, ಊರ ಸುತ್ತಮುತ್ತಲ ಹತ್ತಾರು ಧರ‍್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಮತ್ತಿತರ ವಿಧಾಯಕ ಕರ‍್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಯಶಸ್ವೀ ಸಂಘಟಕನಾಗಿ ತನು ಮನ-ಧನ ಸಹಾಯ ಸಹಕಾರ ನೀಡುತ್ತ ಬಂದಿದ್ದ ಇವರು ಜನಪರ ಹೋರಾಟಗಳಲ್ಲಿಯೂ ಕೂಡ ಮುಂಚೂಣಿಯಲ್ಲಿರುತ್ತಿದ್ದರು. ಅನೇಕ ಬಡ ರೋಗಿಗಳು ಮತ್ತು ಅನಾರೋಗ್ಯ ಪೀಡಿತರನ್ನು ದೂರದ ಮಂಗಳೂರು, ಮಣಿಪಾಲ ಮುಂತಾದ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆಗೊಳಪಡಿಸುತ್ತಿದ್ದ ಬೀರಾ ಗೌಡ ಅವರು ತರ‍್ತು ಸಂರ‍್ಭಗಳಲ್ಲಿ ರಕ್ತದಾನವನ್ನೂ ಸಹ ಮಾಡಿದ್ದರು.

ಗಂಗವಳಿ ನದಿ ನೆರೆ ಹಾವಳಿಯ ಸಂರ‍್ಭದಲ್ಲಿ ಶಿರೂರಿನ ಗ್ರಾಮದ ಅನೇಕ ಸಂತ್ರಸ್ತರನ್ನು ಸ್ಥಳಾಂತರಿಸುವಲ್ಲಿ ಬಹಳ ಶ್ರಮ ವಹಿಸಿದ್ದರು.ವಿಶೇಷ ತಳಿಯ ಬಾಳೆ ತೋಟ ಬೆಳೆಸಿ, ತನ್ನ ಸಹೋದರರೊಂದಿಗೆ ಕೂಡಿ ಕೃಷಿ- ವ್ಯಾಪಾರ ಕ್ಷೇತ್ರಗಳಲ್ಲಿಯೂ ಪ್ರಗತಿಪರರಾಗಿ ಗುರುತಿಸಿಕೊಂಡಿದ್ದರು. ಮೃತ ಬೀರಾ ಗೌಡ ಇವರು, ತಾಯಿ, ಪತ್ನಿ, ಪುತ್ರಿ ಹಾಗೂ ಪುತ್ರರು ಮತ್ತು ಅಪಾರ ಬಂಧು ಬಳಗ ತೊರೆದಿದ್ದಾರೆ. ಜನಾನುರಾಗಿ ಮುಖಂಡ ನ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ ಸೇರಿದಂತೆ ಸ್ಥಳೀಯ ಹಾಗೂ ತಾಲೂಕಿನ ಹಲವು ಗಣ್ಯರು, ಹಾಲಕ್ಕಿ ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version