ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೊನ್ನಾವರ ವಲಯದ ಸಾಮೋಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಡುಪಿ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡ ದೀಪ ಬೇಳಗಿಸುವುದರ ಮೂಲಕ ನೆರವೇರಿಸಿದರು.
ನಂತರ ಮಾತನಾಡಿ ಕುಟುಂಬವನ್ನು ಸ್ವಾವಲಂಭನೆಯ ಪಥದಲ್ಲಿ ಮುನ್ನಡೆಸಲು ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಲಿದೆ. ರಾಜ್ಯದಲ್ಲಿ 5 ಲಕ್ಷದ 35 ಸಾವಿರ ಸಂಘಗಳು, 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಮಾಜಮುಖಿ ಕಾರ್ಯದ ಮೂಲಕ ಗ್ರಾಮಾಭಿವೃದ್ದಿ ಯೋಜನೆಯು ಇಂದು ವಿಶ್ವದೆಲ್ಲಡೆ ಮನ್ನಡೆ ಪಡೆದಿದೆ ಎಂದರು.
ನಿಕಟಪೂರ್ವ ಯೋಜನೆಯ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಯೋಜನೆಯ ಫಲಾನುಭವಿಗಳಿಗೆ ಪ್ರಗತಿನಿದಿ , ಜಲಮಂಗಲಾ, ಶೌಚಾಲಯ ನಿರ್ಮಾಣ, ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಗೌರಧ್ಯಕ್ಷರು ಹೊನ್ನಾವರ ಪಟ್ಟಣ ಪಂಚಾಯತ ಸದಸ್ಯರು ಆಗಿರುವ ಶಿವರಾಜ ಮೇಸ್ತ ಮಾತನಾಡಿ ಇಂದು ಭಜನೆಗಳು ನಶಿಸುತ್ತಿದೆ. ಇದನ್ನು ಗಮನಿಸಿದ ಹೆಗ್ಗಡೆಯವರು 5500ಕ್ಕೂ ಹೆಚ್ಚಿನ ಭಜನಾ ಮಂಡಳಿಯನ್ನು ರಚಿಸುವ ಮೂಲಕ ನಶಿಸುವ ಕಲೆಯನ್ನು ಉಳಿಸಿದ್ದಾರೆ ಎಂದರು.
ಶಿಕ್ಷಕರಾದ ಚಿದಾನಂದ ಪಟಗಾರ ಧಾರ್ಮಿಕ ಉಪನ್ಯಾಸ ನೀಡಿದರು, ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ನಿವೃತ ಸೈನಿಕರಾದ ರಾಜೇಶ ನಾಯ್ಕ, ಪೂಜಾ ಸಮಿತಿ ಅಧ್ಯಕ್ಷರಾದ ಶ್ರೀಪಾದ ನಾಯ್ಕ, ಯೋಜನಾಧಿಕಾರಿ ವಾಸಂತಿ ಅಮಿನ್, ಮೇಲ್ವಿಚಾರಕ ನಾಗರಾಜ್ ಕೆ, ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸಾಮೋಹಿಕ ಸತ್ಯನಾರಾಯಣ ಪೂಜೆ, ನಂತರ ಸಾಂಸ್ಕ್ರತಿಕ ಮನೊರಂಜನಾ ಕಾರ್ಯಕ್ರಮ ಜರುಗಿತು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.