ಏಕ ನಿದೇಶನ ಈ ಸ್ವತ್ತು ಅನುಮೋದನೆ ಸಂದರ್ಭದಲ್ಲಿ ರಸ್ತೆ ಹಸ್ತಾಂತರ: ಸ್ಥಳೀಯ ಸಂಸ್ಥೆಗಳು ಉಚಿತವಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ

ಉಚ್ಚ ನ್ಯಾಯಾಲಯದ ರಿಟ್ ಪಿಟಿಶನ್ ಆದೇಶದ ಬಗ್ಗೆ ಉಲ್ಲೇಖಿಸಿ ಎಚ್ಟರಿಸಿರ ನೋಟರಿ ಸಂಘದ ಜಿಲ್ಲಾಧ್ಯಕ್ಷ

ಅಂಕೋಲಾ : ಬಿನ್ ಶೇತ್ಗಿ ಜಮೀನುಗಳಿಗೆ ಈ ಸ್ವತ್ತು ಪಡೆಯುವ ಸಂದರ್ಭದಲ್ಲಿ ನಗರ ಯೋಜನೆ ಇಲಾಖೆಯ ಲೇ ಔಟ್ ವರದಿಯಂತೆ ನಗರ ಸಭೆ, ಪುರಸಭೆ, ಅಥವಾ ಪಟ್ಟಣ ಪಂಚಾಯತನವರು ರಸ್ತೆ ಹಸ್ತಾಂತರವನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರಿಂದ ರಸ್ತೆ ಹಸ್ತಾಂತರವನ್ನು ಉಚಿತವಾಗಿ ಮಾಡಿಕೊಳ್ಳದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತನ್ನ ರಿಟ್ ಪಿಟಿಷನ್ ನಲ್ಲಿ ಆದೇಶವನ್ನು ಹೊರಡಿಸಿದೆ ಎಂದು ನ್ಯಾಯವಾದಿ ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ನಾಗಾನಂದ. ಐ.ಬಂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠ ತನ್ನ ರಿಟ್ ಆದೇಶದಲ್ಲಿ ಯಾವುದೇ ಪರಿಹಾರವನ್ನು ನೀಡದೆ ಏಕ ನಿವೇಶನ ಅನುಮೋದನೆ ಸಂದರ್ಭದಲ್ಲಿ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ಪರಿಹಾರವನ್ನು ನೀಡಿಯೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳತಕ್ಕದ್ದು ಎಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಪೀಠ ರಿಟ್ ಸಂಖ್ಯೆ: 25205/2023 ನೇದರಲ್ಲಿ ಸ್ವಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ.

ಆದ್ದರಿಂದ ಅಂಕೋಲಾ ಪುರಸಭೆ ಸೇರಿದಂತೆ ರಾಜ್ಯದ ನಗರ ಸಭೆ, ಪಟ್ಟಣ ಪಂಚಾಯತಗಳು ಈ ಸ್ವತ್ತು ವಿತರಿಸುವಾಗ ಬಿನ್ ಶೇತ್ಗಿ ಲೇ ಔಟ್ ಅನುಮೋದನೆ ಸಂಧರ್ಭದಲ್ಲಿ ಉಚಿತವಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೊನೆಗೊಳ್ಳಬೇಕಿದೆ. ಒಂದು ವೇಳೆ ಹಿಂದಿನ ಪ್ರಕ್ರಿಯೆ ಮುಂದುವರೆದಲ್ಲಿ ಅದು ನ್ಯಾಯಾಂಗ ನಿಂದನೆಯಾಗಲಿದೆ. ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನ್ಯಾಯವಾದಿ ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ನಾಗಾನಂದ. ಐ.ಬಂಟ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಬೇಟಿಯಾಗಿ ಮನವಿಯನ್ನು ನೀಡುವುದಾಗಿಯೂ ಅವರು ತಿಳಿಸಿದ್ದಾರೆ.ಸಾರ್ವಜನಿಕ ಕಳಕಳಿಯಿಂದ ನಾಗಾನಂದ ಬಂಟ ನೀಡಿರುವ ಈ ಹೇಳಿಕೆ ಮತ್ತು ಕೋರಿಕೆ,ಪುಕ್ಕಟೆ ಭೂಮಿ ಕಳೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದ ಹಲವರ ಪಾಲಿಗೆ ಆಶಾಕಿರಣವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version