Important
Trending

ಕಳವು ಮಾಡಿಕೊಂಡು, ಅಕ್ರಮವಾಗಿ ಜಾನುವಾರು ಕೂಡಿಟ್ಟ ಆರೋಪ : ಜಾನುವಾರು ಸಮೇತ ಆರೋಪಿ ವಶಕ್ಕೆ

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣ ವ್ಯಾಪ್ತಿಯ ಬಣಸಾಲೆಯಲ್ಲಿ ವಧೆ ಮಾಡುವ ಉದ್ದೇಶದಿಂದ ವ್ಯಕ್ತಿಯೊರ್ವ ಅಕ್ರಮವಾಗಿ ಜಾನುವಾರುಗಳನ್ನು ಕೂಡಿಟ್ಟಿದ್ದು, ಪೊಲೀಸರು ದಾಳಿ ನಡೆಸಿ ಜಾನುವಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಆರೋಪಿತನು ಕಸಾಯಿಖಾನೆಗೆ ಸಾಗಾಟ ಮಾಡಲು ಅಥವಾ ಕಡಿದು ಮಾರಾಟ ಮಾಡುವ ಉದ್ದೇಶದಿಂದಲೋ ಸುಮಾರು 60 ಸಾವಿರ ರೂ ಮೌಲ್ಯದ 7 ಎತ್ತುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿದ್ದ.

ತನ್ನ ಮನೆಯ ಹಿಂಭಾಗದ ಜಾಗದಲ್ಲಿನ ತೆಂಗಿನ ಮರಗಳಿಗೆ ಜಾನುವಾರು ಕಟ್ಟಿ ಹಾಕಿದ್ದ. ಈ ವಿಷಯ ತಿಳಿದ ಮಂಕಿ ಠಾಣಾ ಪಿಎಸೈ ಭರತ್ ಕುಮಾರ್ .ವಿ, ಸಿಬ್ಬಂದಿಗಳೊoದಿಗೆ ದಾಳಿ ನಡೆಸಿ ಜಾನುವಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ, ಬಂಧಿತ ಆರೋಪಿ ಮಂಕಿ ಬಣಸಾಲೆಯ ಉಸ್ಮಾನಿಯಾ ಸ್ಟ್ರೀಟ್ ನಿವಾಸಿ ಶಾಹದತ್ ಸಾವುಡಾ ಅಶ್ರಫ್ ಸಾವುಡಾ ಎಂದು ಗುರುತಿಸಲಾಗಿದೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button