ಕುಮಟಾ : ತಾಲೂಕಿನ ತಲಗೋಡಿನ ಸ್ವರ್ಣ ಮಹಾಸತಿ ಯಕ್ಷಿ ಚೌಡೇಶ್ವರಿ ದೇವಸ್ಥಾನದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಹಣತೆಯಲ್ಲಿ ದೀಪವನ್ನು ಬೆಳಗಿಸಿ ದೇವಿಯ ಕೃಪೆಗೆ ಪಾತ್ರರಾದರು. ಬೆಳಿಗ್ಗೆ 6 ಗಂಟೆಗೆ ದೇವರ ಪಲ್ಲಕ್ಕಿಯು ದೇವಾಲಯದಿಂದ ಹೊರಟು ಹರನೀರು, ಬಗ್ಗೋಣ, ಕುಮಟಾ, ಹೆರವಟ್ಟಾ, ಕೋಟೆಗುಡ್ಡ, ವಾಲಗಳ್ಳಿ, ಉಂಚಗಿ ಮಾರ್ಗವಾಗಿ ಸ್ವಸ್ಥಾನಕ್ಕೆ ಮರಳಿತು.
ಈ ವೇಳೆ ನಡೆದ ಅದ್ದೂರಿ ಮೆರವಣಿಗೆ ಹಾಗೂ ಸಿಡಿಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತು. ನಂತರ ಉತ್ಸವ ಮೂರ್ತಿಯನ್ನು ಶುದ್ಧಿಕರಿಸಿ ದೇವಾಲಯದ ಗರ್ಭಗುಡಿಯ ಪ್ರವೇಶ ಮಾಡಲಾಯಿತು. ನಂತರ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರಾದ ಸೂರ್ಯಕಾಂತ ಭಟ್ ಚಾಲನೆ ನೀಡಿದರು. ನೋತರ ವಿದ್ವಾನ್ ದತ್ತಮೂರ್ತಿ ಭಟ್ ಸಂಘಟನೆಯ ನಾಟ್ಯಶ್ರೀ ಕಲಾಕೇಂದ್ರ ಶಿವಮೊಗ್ಗಾ ಇವರಿಂದ ಲಂಕಾದಹನ ಯಕ್ಷಗಾನ ನಡೆಯಿತು.
ವಿಸ್ಮಯ ನ್ಯೂಸ್, ಕುಮಟಾ