ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿಟ್ಟ ಬೈಕ್ ಕಳ್ಳತನ: ಆರೋಪಿಯ ಬಂಧನ

ಕುಮಟಾ: ವೈಭವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿಟ್ಟ ಬೈಕ್‌ನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ಮೂಲದ ಗಾರೆ ಕೆಲಸ ಮಾಡುತ್ತಿದ್ದ ಖಾಲಿದ್ ಶರಿಪ್ ಸಾಬ್ ಕನವಳ್ಳಿ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಈತ ಕುಮಟಾ, ಶಿರಸಿ, ಭಟ್ಕಳದಲ್ಲಿ ಕಳ್ಳತನಮಾಡಿದ ಒಂದು ಲಕ್ಷ ಮೌಲ್ಯದ 03 ಬೈಕ್‌ನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಷ್ಣುವರ್ಧನ ಪೊಲೀಸ್ ಅಧೀಕ್ಷಕರು ಕಾರವಾರ, ಸಿ.ಟಿ ಜಯಕುಮಾರ ಎಡಿಶನಲ್ ಎಸ್.ಪಿ ಕಾರವಾರ, ಶ್ರೀಕಾಂತ ಕೆ ಡಿ.ಎಸ್.ಪಿ ಭಟ್ಕಳ ಹಾಗೂ ತಿಮ್ಮಪ್ಪ ನಾಯ್ಕ್, ಪೊಲೀಸ ನಿರೀಕ್ಷಕರು ಕುಮಟಾ ಪೊಲೀಸ ಠಾಣೆ ರವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ ಠಾಣೆಯ ಪಿ.ಎಸ್.ಐ ನವೀನ್ ಎಸ್. ನಾಯ್ಕ, ಪಿ.ಎಸ್.ಐ ಸುನೀಲ ಬಂಡಿವಡ್ಡರ್, ಪಿ.ಎಸ್.ಐ ಪದ್ಮಾ ದೇವಳಿಯವರು ತನಿಖೆಯನ್ನು ಕೈಗೊಂಡ ಆರೋಪಿತನಾದ ಖಾಲಿದ್ ಶರಿಪ್ ಸಾಬ್ ಕನವಳ್ಳಿ ಬಂಧಿಸಿದ್ದಾರೆ.

ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ನವೀನ ಎಸ್. ನಾಯ್ಕ, ಗಣೇಶ ನಾಯ್ಕ, ಗುರು ನಾಯಕ ಹಾಗೂ ಪ್ರದೀಪ ನಾಯಕ,ಸಿ.ಪಿ.ಸಿ 1681 ಸಂತೋಷ ಚೆನ್ನಣ್ಣನವರ್ ಹಾಗೂ ಮಾರುತಿ ಗಾಳಿಪೂಜಿ ಇವರುಗಳ ತಂಡ ಭಾಗಿಯಾಗಿತ್ತು.

ವಿಸ್ಮಯ ನ್ಯೂಸ್, ನಾಗೇಶ್ ದೀವಗಿ, ಕುಮಟಾ

Exit mobile version