ಕ.ವಿ.ವಿ ಕ್ರೀಡಾಕೂಟ: 4×400 ರೀಲೆಯಲ್ಲಿ ಅಂಕೋಲಾ ವಿದ್ಯಾರ್ಥಿಗಳ ಚಿನ್ನದ ಓಟ

ಅಂಕೋಲಾ: ಇತ್ತೀಚೆಗೆ ನಡೆದ ಕರ್ಣಾಟಕ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ ವಿಭಾಗದ 4×400 ಮೀ ರೀಲೆ ಓಟದಲ್ಲಿ ತಾಲ್ಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಪ್ರಥಮ ಸ್ಥಾನಗಳಿಸಿದ್ದಾರೆ. ಅನೀಶ್ ಸಂತೋಷ್ ನಾಯ್ಕ ,ಮನೀಷ ಹೊನ್ನಪ್ಪ ನಾಯಕ, ರೋಹನ್ ಬಾಬು ನಾಯ್ಕ ಮತ್ತು ಕಿರಣ್ ಗೋವಿಂದ್ರಾಯ್ ಗೌಡ ಇವರು ವೇಗವಾಗಿ ಓಡಿ ಗುರಿ ತಲುಪಿ,  ಪ್ರಥಮ ಸ್ಥಾನದೊಂದಿಗೆ ಚಿನ್ನದಪದಕ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಬಂಗಾರದ ಓಟದ ಸಾಧನೆಗೆ ಕಾಲೇಜ್ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸತೀಶ ಕೆ ಸೈಲ್ ವಿಶೇಷ ಪ್ರಶಂಸೆ ವ್ಯಕ್ತ ಪಡಿಸಿ ಅಭಿನಂದಿಸಿದ್ದು, ಕಾಲೇಜು ಪ್ರಾಂಶುಪಾಲರಾದ ಡಾ. ಶಾರದಾ ಎಸ ಭಟ್ಟ, ಕ್ರೀಡಾ ಸಂಚಾಲಕರಾದ ನಾರಾಯಣ ಸ್ವಾಮಿ, ದೈಹಿಕ ಶಿಕ್ಷಕರಾದ ಶ್ರೀಷ ನಾಯಕ ಸೇರಿದಂತೆ ಕಾಲೇಜಿನ ಬೋಧಕ – ಬೋದಕೇತರ ಸಿಬ್ಬಂದಿಗಳು, ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version