ದಟ್ಟ ಕಾಡಿನ ರಸ್ತೆ ಮಧ್ಯದಲ್ಲಿಯೇ ಸುರಕ್ಷಿತ ಹೆರಿಗೆ
108 ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ ಗರ್ಭಿಣಿ ಮಹಿಳೆಯನ್ನು ತಡರಾತ್ರಿ 108 ವಾಹನದಲ್ಲಿ ಕಾರವಾರ ಸಾಗಿಸುವ ವೇಳೆ ವಾಹನದಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.
ಗುರುವಾರ ಜೊಯಿಡಾ ತಾಲೂಕಾ ಆಸ್ಪತ್ರೆಗೆ ದಾಖಲಾದ ದೇವಕಿ ವಾಲೇಕರ ಎನ್ನುವ ಗರ್ಭಿಣಿ ಮಹಿಳೆಯನ್ನು ಇಲ್ಲಿಂದ ಕಾರವಾರ ಜಿಲ್ಲಾ ಆಸ್ಪತ್ರೆಗೆ ಒಯ್ಯುವ ವೇಳೆ ಅಣಶಿ ಘಟ್ಟ ಮದ್ಯೆ ಗುರುವಾರ ರಾತ್ರಿ 11 ಘಂಟೆಯ ವೇಳೆಗೆ ಇ.ಎಮ್.ಟಿ ದೇವಲ ನಾಯ್ಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಜನನವಾದ ಹೆಣ್ಣು ಮಗು ಕೂಡಾ ಆರೋಗ್ಯದಿಂದಿದ್ದು, ವಾಹನ ಚಾಲಕ ವಿನಾಯಕ ಎಸ್ ಮತ್ತು ದೇವಲಾ ನಾಯ್ಕ ಇವರ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
- ಗುಡ್ಡಗಾಡು ಅರಣ್ಯ ಪ್ರದೇಶ ಹೊಂದಿರುವ ಜೊಯಿಡಾ ತಾಲೂಕಿನಲ್ಲಿ 108 ತುರ್ತು ಸೇವೆಯ ಅಂಬ್ಯುಲೆನ್ಸ್ ನಿಂದ ಹಲವಾರು ಅನಾರೋಗ್ಯ ಪೀಡಿತರಿಗೆ, ಗರ್ಭಿಣಿಯರಿಗೆ ಸಾಕಷ್ಟು ಉಪಯೋಗವಾಗುತ್ತಿದೆ.
- ಇಲ್ಲಿಯ ವರೆಗೆ ಸುಮಾರು 45 ಕ್ಕೂ ಹೆಚ್ಚು ಗರ್ಭಿಣಿಯರನ್ನು ತುರ್ತು ಸಂದರ್ಬದಲ್ಲಿ ರಸ್ತೆ ಮದ್ಯದಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಜೊಯಿಡಾ 108 ವಾಹನ ಸಿಬ್ಬಂದಿಗಳದ್ದಾಗಿದೆ.
- ಈ ಸಿಬ್ಬಂದಿಗಳೆಲ್ಲರ ನಿಸ್ವಾರ್ಥ ಸೇವೆಯ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಸ್ಮಯ ನ್ಯೂಸ್, ಜೋಯ್ಡಾ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568