ಹೊನ್ನಾವರ: ತಾಲೂಕಿನ ಬಳ್ಕೂರ ರಥಬೀದಿಯ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ 15 ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೆಂಡ ಹಾಯುವ ಕಾರ್ಯಕ್ರಮ ಬಲು ವಿಜೃಂಭಣೆಯಿoದ ಸಾವಿರಾರು ಭಕ್ತ ಸಮುಖದಲ್ಲಿ ನಡೆಯಿತು. 10 ಟನ್ ಪಟ್ಟಿಗೆಯಿಂದ ತಯಾರಿಸಿದ ಅಗ್ನಿಯಲ್ಲಿ ಮಾಲೆದರಿಸಿದ ಸ್ವಾಮಿಗಳು ಅಗ್ನಿ ಪ್ರವೇಶ ಭಕ್ತರ ಗಮನ ಸೆಳೆಯಿತು.
ಈ ಎಲ್ಲಾ ಕಾರ್ಯಕ್ರಮಗಳು ಬಳ್ಕೂರ ಸನ್ನಿಧಾನದ ಗುರು ಸ್ವಾಮಿ ಶ್ರೀ ಕ್ಷೇತ್ರ ನೀಲಗೋಡ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಯವರ ನೇತ್ರತ್ವದಲ್ಲಿ ಮಂಕಿ ಸನ್ನಿಧಾನದ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ನೇರವೇರಿತು. ನಿರ್ಧರಿಸಿದಂತೆ ಈ ಕಾರ್ಯಕ್ರಮ ಬುಧವಾರ ನೇರವೇರಬೇಕಿತ್ತು. ಅಂದು ಕೊಡ್ಲಮನೆ ವಿಷ್ಣು ಮೂರ್ತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪಾಂಡುರoಗ ಭಂಡಾರಕರ್ ರವರು ಸನ್ನಿಧಾನದಲ್ಲಿ ಪೂಜೆ ನಡೆಯುತ್ತಿದ್ದಾಗ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತ ಪಟ್ಟಿದ್ದರು.
ಕೆಂಡದಮೇಲೆ ಉರುಳು ಸೇವೆ ಮಾಡಿದ ಬಳ್ಕೂರ ಗುರು ಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ನೀಲಗೋಡ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ, ಹಾಗು ಬಳ್ಕೂರ ಸನ್ನಿಧಾನದ ಮಾರುತಿ ಸ್ವಾಮಿ, ರಾಮ ಸ್ವಾಮಿ ಜೊತೆ ಬಾಲ ಮಾಲದಾರಿಗಳು ಕೇಂಡದಮೇಲೆ ಹೂವಿನ ಹಾಸಿಗೆಯ ಮೇಲೆ ನಡೆದಂತೆ ನಿಧಾನವಾಗಿ ಪವಾಡವೆಂಬತೆ ಪ್ರದಕ್ಷಿಣೆಹಾಕಿದರು. ನೆರದಿದ್ದ ಸಾವಿರಾರು ಭಕ್ತರು ಈ ಕ್ಷಣ ಭಾವಪರವಶರಾಗಿ ದೇವರ ಅಪಾರ ಶಕ್ತಿಯನ್ನು ಕೊಂಡಾಡಿದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ