ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಾಪತ್ತೆ

ಅಂಕೋಲಾ: ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು  ಪಕ್ಕದ ಜಿಲ್ಲೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವಳು, ಕಾಣೆಯಾದ ಘಟನೆ ಘಟನೆ ತಾಲೂಕಿನ ಬಳಳೆ ಮಾದನಗೇರಿ ವ್ಯಾಪ್ತಿಯಲ್ಲಿ ನಡೆದಿದೆ.  ತಾಲೂಕಿನ ಬಳಲೆ ನಿವಾಸಿ ಪ್ರೀತಿ ಶ್ರೀನಿವಾಸ ನಾಯ್ಕ (21) ಕಾಣೆಯಾದ ಯುವತಿಯಾಗಿದ್ದಾಳೆ.

ಮಂಗಳೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದವಳು, ಕಳೆದ 3 ತಿಂಗಳ ಹಿಂದೆ ಕಾಲೇಜ್ ಬಿಟ್ಟು ಮನೆಯಲ್ಲಿಯೇ ಬಂದು ಇದ್ದವಳು, ದಿನಾಂಕ  17 – 11 – 2023  ರಂದು  ಬೆಳಿಗ್ಗೆ  6.00  ಘಂಟೆಗೆ ಉಡುಪಿಗೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಲ್ಲಿ ಹೇಳಿ, ಅಂಕೋಲಾ ತಾಲೂಕಿನ ಬಳಲೆ – ಮಾದನಗೇರಿಯಲ್ಲಿರುವ ತನ್ನ ಮನೆಯಿಂದ ಹೋದವಳು, ಇದುವರೆಗೂ ವಾಪಸ್ ಮನೆಗೆ ಬಾರದೇ, ಫೋನ್ ಸಂಪರ್ಕಕ್ಕೂ ಸಿಗದೇ ನಡುವಿನ ಅವಧಿಯಲ್ಲಿ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾಳೆ ಎಂದು, ಕಾಣೆಯಾದ ಪ್ರೀತಿ ಇವಳ ತಾಯಿ ಮಾದೇವಿ ಶ್ರೀನಿವಾಸ  ನಾಯ್ಕ   ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.  ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಅಂದಾಜು 5 ಪೂಟ್ 2ಇಂಚು ಎತ್ತರ, ಗೋದಿ ಮೈ ಬಣ್ಣ, ಉದ್ದನೆಯ ಮುಖ, ಸಾಧಾರಣ  ಮೈಕಟ್ಟು ಹೊಂದಿರುವ ಈ ಯುವತಿ ,ಕನ್ನಡ   ಭಾಷೆ ಅರಿತಿದ್ದು, ಮನೆಯಿಂದ ಹೋಗುವಾಗ  ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಲಗ್ಗಿನ್ಸ ಪ್ಯಾಂಟ್,  ಬಿಳಿಯ  ಬಣ್ಣದ ವೇಲ್, ಕುತ್ತಿಗೆಯಲ್ಲಿ ಕಪ್ಪು ದಾರ, ಬಲ ಕೈಯಲ್ಲಿ ಕಪ್ಪು  ದಾರ ಮತ್ತು ಗದೆ ಲಾಕೆಟ್ ಇದ್ದು, ಕಪ್ಪು ಬಣ್ಣದ  ಚಪ್ಪಲಿ ಧರಿಸಿದ್ದು*,ಈ ಮೇಲಿನ ಚಹರೆಯುಳ್ಳ ಪ್ರೀತಿ ನಾಯ್ಕ ಎಲ್ಲಿಯಾದರೂ  ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ  ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನದಿಂದ ದಿನಕ್ಕೆ ಅಂಕೋಲಾದಲ್ಲಿ ಹದಿಹರೆಯದವರ ಮತ್ತು ಮಹಿಳೆಯರ ಕಾಣೆ ಪ್ರಕರಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಅಂಶವಾಗಿದೆ. ಕೆಲ ಪ್ರಕರಣಗಳು ಪೋಲೀಸ್ ಠಾಣೆಯಲ್ಲಿ ದಾಖಲಾದರೆ, ಮರ್ಯಾದೆ ಮತ್ತಿತರ ಕಾರಣಗಳಿಂದ ಮತ್ತೆ ಕೆಲ ಪ್ರಕರಣಗಳು ದಾಖಲಾಗದೇ ಇರುವುದು ಇಲ್ಲವೇ ವಿಳಂಬವಾಗಿ ದಾಖಲಾಗುತ್ತಿವೆ ಎನ್ನಲಾಗಿದ್ದು , ಬಹುತೇಕ ನಾಪತ್ತೆ (ಕಾಣೆ ) ಪ್ರಕರಣಗಳು ಪ್ರೀತಿ – ಪ್ರೇಮ – ಆಕರ್ಷಣೆ ಸುತ್ತ ಗಿರಕಿ ಹೊಡೆಯುತ್ತಿವೆ ಎನ್ನಲಾಗಿದೆ. ಈ ಹಿಂದೆ  ಸರಿಸುಮಾರು ಇದೇ ದಿನಾಂಕದಂದು (17 – 11 – 23) ಬೆಲೇಕೇರಿ ಮೂಲದ , ಕಾರವಾರದಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ  ವಿದ್ಯಾರ್ಥಿನಿ ಕಾಣೆಯಾಗಿ, ದೂರದ ಕೇರಳದಲ್ಲಿರುವುದನ್ನು ಪೊಲೀಸರು ಪತ್ತೆ ಮಾಡಿ, ನಂತರ ಕಾರವಾರ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿ, ಅಲ್ಲಿಂದ ಪಾಲಕರೊಂದಿಗೆ ಮನೆಗೆ ಮರಳಿದ್ದನ್ನು ಸ್ಮರಿಸಬಹುದಾಗಿದೆ.               

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version