Important
Trending

1,200 ಚಾಕ್ ಪೀಸ್ ಬಳಸಿ ರಾಮಮಂದಿರದ ಕಲಾಕೃತಿ: 25 ದಿನಗಳ ಕಾಲ ಕೆಲಸ: ವಿಭಿನ್ನ ಕಲಾಕೃತಿ ಮೂಲಕ ಗಮನಸೆಳೆದ ಕಲಾವಿದ

ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ, ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ ನಾಯ್ಕ, ಚಿಕ್ಕಂದನಿoದಲೂ ವಿವಿಧ ಕಲೆಯಲ್ಲಿ ಆಸಕ್ತಿಯನ್ನು ಹೊಂದಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಚಿತ್ರಕಲೆ ,ತಬಲಾ ,ಸಂಗೀತ , ಚಾಕ್ ಪೀಸ್ ಆರ್ಟ್ ಹೀಗೆ ಹಲವು ರಂಗದಲ್ಲಿ ಸಾಧನೆ ಮಾಡಿದ್ದರು.

ಇದೀಗ ಸರಿ ಸುಮಾರು 1200 ಚಾಕ್ ಪೀಸ್ ಬಳಸಿ 25 ದಿನಗಳು 250 ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ರಾಮ ಮಂದಿರದ ಮಾದರಿ ಕಲಾಕೃತಿಯನ್ನು ಮಾಡಿದ್ದಾರೆ. ಜನವರಿ 22ರ ರಾಮಮಂದಿರದ ಉದ್ಘಾಟನೆಯ ದಿನವೇ ತಮ್ಮ ಕಲೆಯನ್ನು ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಗೋವಿಂದ ಎಸ್ ನಾಯ್ಕ ಹಾಗೂ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರಾದ ಸೂರಾಲು ಚಂದ್ರಶೇಕರ್ ಭಟ್ ಅವರ ಅಮೃತ ಹಸ್ತದಿಂದ ಅನಾವರಣಗೊಳಿಸಲಿದ್ದಾರೆ.

2021 ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ್ದರು. ಬುದ್ಧ , ಗಾಂಧೀಜಿ , ಐಫೆಲ್ ಟವರ್, ಸೂರ್ಯನಮಸ್ಕಾರ ದ ಆಕೃತಿ ಹೀಗೆ ಹತ್ತು ಹಲವು ಆಕೃತಿಯನ್ನು ಮಾಡಿ ಎಲ್ಲರನ್ನು ಆಕರ್ಷಿಸಿದ್ದರು. ಪ್ರಸ್ತುತ ಅವರು ಸ್ನಾತಕೋತ್ತರ ಪದವಿಯನ್ನ ಜೆ. ಎಸ್. ಎಸ್ ವಿದ್ಯಾಸಂಸ್ಥೆ ವಿದ್ಯಾಗಿರಿ ಧಾರವಾಡದಲ್ಲಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ ನಾಯ್ಕ ರಾಮ ಮಂದಿರ ಉದ್ಘಾನೆಗೆ ದೇಶವೆ ಕ್ಷಣ ಗಣನೆಗೆ ಸಾಕ್ಷಿಯ್ಯಾಗುತ್ತಿದೆ, ಹಾಗಾಗಿ ಇದೀಗ ಸರಿ ಸುಮಾರು 1200 ಚಾಕ್ ಪೀಸ್ ಬಳಸಿ 25 ದಿನಗಳು 250 ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ರಾಮ ಮಂದಿರದ ಮಾದರಿ ಕಲಾಕೃತಿಯನ್ನು ನಿರ್ಮಿಸಿದ್ದೇನೆ ಎಂದು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button