Focus News
Trending

ಹೊನ್ನಾವರದಲ್ಲಿ ಅದ್ಧೂರಿಯಾಗಿ ನಡೆದ 16 ವರ್ಷದ ಶರಾವತಿ ಉತ್ಸವ: ಗಮನಸೆಳೆದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು

ಹೊನ್ನಾವರ: ವೆಂಕಟ್ರಮಣ ಹೆಗಡೆ ಕವಲಕ್ಕಿ ಸಾರತ್ಯದ ಸಾಂಸ್ಕೃತಿಕ ವೇದಿಕೆಯ ಮೂಲಕ ಆಯೋಜಿಸಿದ 16 ವರ್ಷದ ಶರಾವತಿ ಉತ್ಸವ ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಪ್ರೌಡಶಾಲಾ ಮೈದಾನದಲ್ಲಿ ನಡೆಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಶರಾವತಿ ಜಲಕುಂಭಕ್ಕೆ ವೇದಿಕೆಯಲ್ಲಿದ ಗಣ್ಯರು ಆರಿತಿ ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆರೆಮನೆ ಯಕ್ಷಗಾನ ಅಕಾಡೆಮಿಯ ನಿರ್ದೇಶಕರು ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ನದಿ ಮೂಲ ಹಾಗೂ ನೆಲ ಮೂಲವನ್ನು ಮುಂದಿನ ತಲೆಮಾರಿಗೆ ಜೀವಂತವಾಗಿರಿಸಲು ಸಾಂಸ್ಕೃತಿಕ ಉತ್ಸವವಾಗಿ ಶರಾವತಿ ಉತ್ಸವ ಇಂದು ನಮ್ಮ ಮುಂದೆ ಪ್ರದರ್ಶನಗೊಳ್ಳುತ್ತಿದೆ. ಸರ್ಕಾರಗಳು ರಾಜಕೀಯ ರ್ಯಾಲಿ ಬದಲಿಗೆ ಸಾಂಸ್ಕೃತಿಕ ರ್ಯಾಲಿ ನಡೆಸುವತ್ತ ಚಿಂತಿಸಬೇಕಿದೆ. ಇಂತಹ ಕಾರ್ಯಕ್ರಮ ಹೊನ್ನಾವರದ ಅಸ್ಮಿತೆಯಾಗಲಿ ಎಂದು ಶುಭಹಾರೈಸಿದರು.

ಹಸೆ ಮಣೆ ಏರಿ ವರ್ಷವಾಗುವುದರೊಳಗೆ ಮಸಣದ ಹಾದಿ ತುಳಿದ ಮಹಿಳೆ| ಗಂಡ ಮತ್ತು ಗಂಡನ ಮನೆಯವರಿಂದಲೇ ಆತ್ಮಹತ್ಯೆಗೆ ಪ್ರೇರಣೆ ಆರೋಪ ?

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಲಕ್ಷಾಂತರ ಜೀವನ ನೀಡಿದ ಶರಾವತಿಯ ಹೆಸರಿನಲ್ಲಿ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಕ್ರತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸಲು ಇಂತಹ ಕಾರ್ಯಕ್ರಮದಿಂದ ಆಗುತ್ತಿದೆ. ವಿವಿಧ ಕಲಾಪ್ರಕಾರಗಳಿಗೆ, ಕಲಾವಿದರಿಗೆ ಪೊತ್ಸಾಹದ ಜೊತೆಗೆ ಪ್ರತಿ ಬಾರಿಯೂ ವಿವಿಧ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾದರಿಯಾಗಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊನ್ನಾವರ ತಾಲೂಕ ಆಸ್ಪತ್ರೆಯ ವೈದ್ಯರಾದ ಡಾ ರಾಜೇಶ ಕಿಣಿ, ಯಕ್ಷಗಾನ ಕಲಾವಿದರಾದ ಸರ್ವೆಶ್ವರ ಹೆಗಡೆ, ನಿವೃತ್ತ ಸೈನಿಕ ಈಶ್ವರ ನಾಯ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ಶಿವಮೊಗ್ಗದ ಅಂಬುತೀರ್ಥದಲ್ಲಿ ಹುಟ್ಟಿ ತಾಲೂಕಿನ ಜನತೆಗೆ ಜೀವನಾಡಿಯಾಗಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಶರಾವತಿಯ ನದಿಯ ಹೆಸರಿನಲ್ಲಿ ನಡೆಯುವ ಈ ಉತ್ಸವ ಮುಂದಿನ ದಿನದಲ್ಲಿ ಇನ್ನಷ್ಟು ವಿಜೃಂಭಣೆಯಿAದ ನಡೆಯಲಿ, ಶರಾವತಿ ನದಿಯು ಇಡೀ ರಾಜ್ಯಕ್ಕೆ ಪರಿಚಯವಾಗಲು ಶರಾವತಿ ಉತ್ಸವ ರಾಜ್ಯ ಮಟ್ಟದ ಉತ್ಸವವಾಗಬೇಕಿದೆ ಎಂದರು.

ವೇದಿಕೆಯಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ, ನಿವೃತ್ತ ಪ್ರಾರ್ಚಾಯರಾದ ಎಸ್.ಜಿ.ಭಟ್, ಸಂಘಟನೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್, ನಾಗರಾಜ ಹೆಗಡೆ, ಮುಂತಾದವರು ಇದ್ದರು, ಕಾರ್ಯಕ್ರಮದ ಪೂರ್ವದಲ್ಲಿ ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಟ್ಯಂಜಲಿ ಕಲಾ ಕೇಂದ್ರ ಶಿರಸಿ ಇವರಿಂದ ಭರತನಾಟ್ಯ, ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ, ಹಾಗೂ ಯಕ್ಷಗಾನ ನೃತ್ಯವೈಭವ, ಗಂದರ್ವ ಕಲಾಕೇಂದ್ರ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ, ದಿವಾಕರ ಇಂಗ್ಲೀಷ್ ಮಾಧ್ಯಮ ಶಾಲೆ ಧಾರೇಶ್ವರ ಇವರಿಂದ ನೃತ್ಯ ನೇರವೇರಿತು. ವಿವಿಧ ಕಲಾವಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button