ಕುಮಟಾ: ತಾಲೂಕಾ ಹಬ್ಬಗಳ ಆಚರಣಾ ಸಮಿತಿ ಕುಮಟಾ ಇವರ ವತಿಯಿಂದ 75 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮವನ್ನು ಕುಮಟಾದ ಮಣಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತಾಂಭೆಯ ಭಾವ ಚಿತ್ರಕ್ಕೆಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ಕುಮಟಾದ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬಳೆ ಅವರು ನೆರವೇರಿಸಿದರು.
ಇದೇ ವೇಳೆ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನ ನಡೆಯಿತು. ಈ ವೇಳೆ ಉದ್ಘಾಟಕರಾದ ಕಲ್ಯಾಣಿ ಕಾಂಬ್ಳೆ ಅವರು ಮಾತನಾಡಿ ಗಣರಾಜ್ಯೋತ್ಸವದ ಶುಭ ಸಂಧೇಶ ನೀಡಿದರು. ಗಣರಾಜ್ಯೋತ್ಸವವು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಸಂಸ್ಕೃತಿಗಳು, ಭಾಷೆಗಳು, ಸಂಪ್ರದಾಯಗಳ ಆಚರಣೆಗಳ ಪ್ರತೀಕವಾಗಿದೆ. ಇಂದು ನಾವು ನಮ್ಮ ಸ್ವಾತಂತ್ರö್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಅವರ ಹೋರಾಟದ ಪ್ರಜಾಪ್ರಭುತ್ವದ ಆದರ್ಶಗಳನ್ನು ಎತ್ತಿಹಿಡಿಯುವ ಜವಾಬ್ಧಾರಿಯನ್ನು ನೆನಪಿಸುವ ದಿನವಾಗಿದೆ. ಪ್ರತಿಯೊಬ್ಬ ಪ್ರಜೆಯು ಸ್ವಾತಂತ್ರö್ಯ, ಸಮಾನತೆ ಮತ್ತು ಸವಕಾಶಗಳೊಂಇದೆ ಬದುಕುವ ರಾಷ್ಟçವನ್ನು ನಿರ್ಮಿಸಲಿಉ ಶ್ರಮಿಸೋಣ. ಹಾಗೂ ಸಂವಿದಾನದ ನಿಯಮಗಳನ್ನು ಉಲ್ಲಂಘಿಸದೇ ದೇಶ ಸೇವೆಗೆ ಸಿದ್ಧರಾಗೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು, ಕ್ರೀಡೆ ಹಾಗೂ ವಿದ್ಯಾಬ್ಯಾಸದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರೆಲ್ಲರೂ ಒಗ್ಗೂಡಿ ಸನ್ಮಾನಿಸಿ ಗೌರವಿಸದರು. ಈ ವೇಳೆ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ 75 ನೇ ಗಣರಾಜ್ಯೋತ್ಸವ ದಿನಾಚರಣೆಯ ವಿಶೇಷವಾಗಿ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕುಮಟಾ ತಹಶೀಲ್ಧಾರರಾದ ಪ್ರವೀಣ ಎಸ್. ಕರಾಂಡೆ, ಕುಮಟಾ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್ ಭಟ್, ಕುಮಟಾ ಪುರಸಭ ಮುಖ್ಯಾಧಿಕಾರಿಗಳಾದ ವಿದ್ಯಾದರ ಕಲಾಧಗಿ, ನಾಗರತ್ನಾ ನಾಯಕ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು, ಶಿಕ್ಷಕ ವೃಂಧದವರು, ವಿವಿದ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ