Important
Trending

ಮುಖ್ಯಮಂತ್ರಿಗಳಿಗೆ ಉದ್ದೇಶಪೂರಕವಾಗಿಯೇ ಏಕವಚನದಲ್ಲಿ ಮಾತನಾಡಿದ್ದೇನೆ : ಅನಂತಕುಮಾರ ಹೆಗಡೆ ಸ್ಪಷ್ಟನೆ

ಕುಮಟಾ: ರಾಜ್ಯದ ಮುಖ್ಯ ಮಂತ್ರಿಯಾದವರು ರಾಷ್ಟçಪತಿಗಳಿಗೆ ಏಕವಚನದಲ್ಲಿ ಮಾತನಾಡಿದೆ ಅದು ಸಭ್ಯತೆ. ಆದರೆ ಅದೆ ಕೆಲಸವನ್ನು ನಾವು ಮಾಡಿದರೆ ಅಸಭ್ಯತೆ. ನನ್ನ ಸ್ವಭಾವದಲ್ಲಿ ಯಾರಬಗ್ಗೆಯೂ ಏಕವಚನದಲ್ಲಿ ಮಾತನಾಡುವ ಅಭ್ಯಾಸವಿಲ್ಲ. ಅದರೆ ಸಿದ್ಧರಾಮಯ್ಯನವರಿಗೆ ಉದ್ಧೇಶಪೂರಕವಾಗಿಯೇ ಏಕವಚನದಲ್ಲಿ ಮಾತನಾಡಿದ್ದೆನೆ ಎಂದು ಸಂಸದ ಅನಂತ ಕುಮಾರ ಹೆಗಡೆ ಸ್ಪಷ್ಟನೆ ನೀಡಿದರು. ಇಂದು ಕುಮಟಾದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸಂಸದರಾದ ಅನಂತ ಕುಮಾರ ಹೆಗಡೆ ಅವರು ಕಳೆದ ಕೆಲ ದಿನಗಳ ಹಿಂದೆ ಕುಮಟಾಕ್ಕೆ ಆಗಮಿಸಿದ ವೇಳೆ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಕೆಲ ವಿದಾತ್ಮಕ ಹೇಳಿಕೆಗಳು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಸಂಸದರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅನಂತಕುಮಾರ ಹೆಗಡೆ ಅವರು ಕುಮಟಾ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಆಗಮಿಸಿದ್ದರು.

ಪೊಲೀಸ್ ವಿಚಾರಣೆಯ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ವಿಚಿತ್ರವಾದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು, ಹಿಂದು ಪರವಾದ ಯಾವ ಮಾತುಗಳನ್ನು ಹಾಗು ಯಾವ ಚಟುವಟಿಕೆಗಳನ್ನು ಸಹಿಸದ ಮನಸ್ಥಿತಿ ಅವರದ್ದಾಗಿದೆ. ರಾಜಕೀಯ ಪಕ್ಷವನ್ನು ವಿರೋಧಿಸುವ ನೆಪದಲ್ಲಿ ಈ ದೇಶದ ಸಾಂಸಕೃತಿಕ ರಾಷ್ಟಿçÃಯತೆ, ಈ ದೇಶದ ನಂಬಿಕೆಯನ್ನು ಚರ್ಚೆಗೆ ಒಳಪಡಿಸುವುದು ಅಪಾಯಕಾರಿ. ಐತಿಹಾಸಿಕವಾಗಿ ಇರುವ ವಿಷಯಗಳನ್ನು ಕಾರ್ಯಕರ್ತರರೊಡನೆ ಹಂಚಿಕೊಳ್ಳಬಾರದು ಎಂಬ ರೀತಿಯಲ್ಲಿ ಹಬ್ಬಾಳಿಕೆ ನಡೆಸುತ್ತಿದ್ದಾರೆ. ಈ ವಿಷಯಕ್ಕಾಗಿಯೆ ನನ್ನ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಮುಖ್ಯ ಮಂತ್ರಿಯಾದವರು ರಾಷ್ಟçಪತಿಗಳಿಗೆ ಏಕವಚನದಲ್ಲಿ ಮಾತನಾಡಿದೆ ಅದು ಸಭ್ಯತೆ. ಆದರೆ ನಾನು ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಅಸಭ್ಯತೆ. ನನ್ನ ಸ್ವಭಾವದಲ್ಲಿ ಯಾರಬಗ್ಗೆಯೂ ಏಕವಚನದಲ್ಲಿ ಮಾತನಾಡುವ ಅಭ್ಯಾಸವಿಲ್ಲ. ಅದರೆ ಸಿದ್ದರಾಮಯ್ಯನವರಿಗೆ ಉದ್ಧೇಶಪೂರಕವಾಗಿಯೇ ಏಕವಚನದಲ್ಲಿ ಮಾತನಾಡಿದ್ದೇನೆ ಎಂದು ಅನಂತ ಕುಮಾರ ಹೆಗಡೆ ಸ್ಪಷ್ಟನೆ ನೀಡಿದರು.

ಇಡೀ ಕರ್ನಾಟಕ ರಾಜ್ಯದ ಆಡಳಿತ ಪರಿಸ್ಥಿತಿ ಇಂದು ಸತ್ತು ಹೋಗಿದೆ. ಲೋಕ ಸಭೆ ಚುನಾವಣೆಯ ಒಳಗಾಗಿ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಆಡಳಿತ ಪರಿಸ್ಥಿತಿಯ ಶ್ವೇತ ಪತ್ರಿಕೆಯನ್ನು ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ಸಂಸದರು ಆಗ್ರಹಿಸಿದರು. ಈ ವೇಳೆ ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ, ಮಂಡಲಾಧ್ಯಕ್ಷರಾದ ಹೇಮಂತ ಗಾಂವಕರ್, ಪ್ರಮುಖರಾದ ಅರುಣ ನಾಯ್ಕ, ವಿನಾಯಕ ನಾಯ್ಕ, ಎಸ್.ಎಸ್ ಹೆಗಡೆ ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button