ಕುಮಟಾ: ಬುರ್ಖಾ ಧರಿಸಿದ ಇಬ್ಬರು ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಬೆಳೆಸಿ ಇನ್ನಿತರ ಪ್ರಯಾಣಿಕರ ಆಭರಣ ಅಪಹರಿಸುವ, ಪಿಕ್ ಪಾಕೇಟ್ ಮಾಡುವ ಕೆಲಸವನ್ನು ಮಾಡುತ್ತಿದ್ದು, ಈ ಇಬ್ಬರು ಮಹಿಳೆಯರ ಕುರಿತಾಗಿ ಪೋಲೀಸ್ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಇವರು ಸಂಚರಿಸುವ ವಿಡಿಯೋವನ್ನು ಸಿಸಿಟಿವಿಯಿಂದ ಸಂಗ್ರಹಿಸಲಾಗಿದೆ.
ಈ ಇಬ್ಬರು ಮಹಿಳೆಯರು ಬಸ್‌ನಲ್ಲಿ ಸಂಚರಿಸುವ ವೇಳೆ ಟಿಕೆಟ್ ಪಡೆದೇ ತೆರಳುತ್ತಿದ್ದ. ಉಚಿತವಾಗಿ ಪ್ರಯಾಣಿಸುವಾಗ ಆಧಾರ್ ಕಾರ್ಡ್ ತೋರಿಸಬೇಕಾಗಿರುವುದರಿಂದ, ಇವರು ಟಿಕೇಟ್ ಖರೀದಿಸಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬುರ್ಖಾ ಧರಿಸಿದ ಇಬ್ಬರು ಮಹಿಳೆಯರು ತಾವು ಕುಳಿತುಕೊಳ್ಳುವ ಬಸ್‌ನಲ್ಲಿ ಮೊದಲೇ ಹೋಗಿ ಕುಳಿತು ಮಹಿಳಾ ಪ್ರಯಾಣಿಕರು ಬಂದಾಗ ತಮ್ಮ ನಡುವೆ ಕೂರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ನಂತರ ಅವರು ಆ ಮಹಿಳಾ ಪ್ರಯಾಣಿಕರ ಆಭರಣ ಅಪಹರಿಸುತ್ತಿದ್ದರು. ಈಗಾಗಲೇ ಕುಮಟಾದಲ್ಲಿ 2, ಹೊನ್ನಾವರ 1, ಭಟ್ಕಳ ಹಾಗೂ ಬ್ರಹ್ಮಾವರದಲ್ಲಿ ತಲಾ ಒಂದೊoದು ಪ್ರಕರಣ ವರದಿಯಾಗಿದೆ. ಬಹುತೇಕ ವೃದ್ಧೆಯರೇ ಇವರ ಟಾರ್ಗೆಟ್. ಕುಮಟಾದಲ್ಲಿ ಆಭರಣ ಅಪಹರಿಸಿ ಎರಡು, ಎರಡೂವರೆ ತಾಸಿನಲ್ಲಿ ಭಟ್ಕಳದಲ್ಲಿ ಪುನಃ ಸರಗಳ್ಳತನ ಮಾಡಿ ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡದ ಪೊಲೀಸರಿಗೆ ಅವರನ್ನು ಪತ್ತೆ ಹಚ್ಚುವುದು ಬಹು ದೊಡ್ಡ ಸವಾಲಾಗಿದ್ದು, ತನಿಖೆ ಕಾರ್ಯ ಮುಂದುವರೆದಿದೆ.
ವಿಸ್ಮಯ ನ್ಯೂಸ್, ಯೋಗೀಶ್, ಮಡಿವಾಳ್. ಕುಮಟಾ