Honnavar News; ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ: ನಮ್ಮೂರ ಶಾಲೆ ಎಂಬ ಅಭಿಮಾನ ಇರಲಿ

ಹೊನ್ನಾವರ: ( Honnavar News) ತಾಲೂಕಿನ ಗುಣವಂತೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಇದೆ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೆಯ ಮೂರು ತರಗತಿಗಳು ಶುಭಾರಂಭಗೊoಡವು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳಗಿನೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾಕ್ಷಿ ಗೌಡ ದೀಪ ಬೇಳಗಿಸುವುದರ ಮೂಲಕ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಎಂ ಹೆಗಡೆ ಮಾತನಾಡಿ ದಾನ ದಾನಿಗಳ ಸಂಸ್ಕಾರ ತಿಳಿಸುತ್ತದೆ. ಇವತ್ತಿನ ದಿನದಲ್ಲಿ ದುಡ್ಡು ಇರುತ್ತದೆ. ಆದ್ರೆ ಕೊಡುವ ಬುದ್ದಿ ಇರುವುದಿಲ್ಲ. ಇದು ನಮ್ಮೂರ ಶಾಲೆ. ನಮ್ಮೂರ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ಭಾವನೆ ಊರಿನಲ್ಲಿ ಇರುವುದು ಬಹಳ ಹೆಮ್ಮೆಯ ಸಂಗತಿ ಎಂದರು.

ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಎಂ ಜಿ ನಾಯ್ಕ ಮಾತನಾಡಿ ಊರವರೇ ಹಣ ಸಂಗ್ರಹ ಮಾಡಿ ಶಾಲೆ ಕಟ್ಟಿದ್ದು, ಜಿಲ್ಲೆಯಲ್ಲಿಯೇ ಇದೊಂದು ಮಹತ್ ಕಾರ್ಯ, ಇದು ಜಿಲ್ಲೆಗೆ ಪ್ರೇರಣೆ ಆಗಬೇಕು. ಇವತ್ತು ಶಾಲೆಗೆ ಕಟ್ಟಡ ಮಂಜೂರು ಆಯ್ತು ಅಂದ್ರೆ ಅದ್ರಲ್ಲಿ ಪರ್ಸಂಟೇಜ್ ಎಷ್ಟು ಸಿಗುತ್ತದೆ ಎಂದು ಕೇಳುವವರೇ ಹೆಚ್ಚು. ಆದ್ರೆ ಗುಣವಂತೆ ಶಾಲೆಯಲ್ಲಿ ಪರ್ಸೆಂಟೇಜ್ ಬದಲಾಗಿ ನಾವು ಕೂಡ ಹಣವನ್ನು ಹಾಕುತ್ತೇವೆ. ನಮ್ಮ ಶಾಲೆಯನ್ನು ಚನ್ನಾಗಿ ನಿರ್ಮಿಸಿ ಕೊಡಿ ಎನ್ನುವ ಪ್ರೋತ್ಸಾಹ ನೀಡಿದ್ದೀರಿ. ಇದು ಗುಣವಂತೆಯಲ್ಲಿ ಮಾತ್ರ ನಡೆಯಲು ಸಾಧ್ಯ . ನನ್ನ 30 ವರ್ಷದ ಸರ್ವಿಸ್ ನಲ್ಲಿ ಇಂತ ಕಾರ್ಯ ಎಲ್ಲಿಯೂ ನೋಡಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ ದೇವಾಡಿಗ ಮಾತನಾಡಿ ನಮ್ಮ ಈ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿದಾರೆ, ನಾವು ಈ ಶಾಲೆಯಲ್ಲಿ ಕಲಿತು ಎನಾಗಿದ್ದೆವೆ, ನಾವು ಶಾಲೆಗೆ ಎನು ಕೋಟ್ಟಿದೇವೆ ಎನ್ನುವುದನ್ನು ಯೋಚಿಸಬೇಕು, ಇನ್ನು ಮುಂದಿನ ಕಟ್ಟಡಕ್ಕೆ ನೀವೆಲ್ಲರು ಸಹಕರಿಸಿ ಎಂದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Exit mobile version