ಕೊನೆಗೂ ಅಧಿಕಾರಿಗಳಿಗೆ ಜ್ಞಾನೋದಯ: ಬಾವಿ ತೋಡಲು ಮಹಿಳೆಗೆ ಒಪ್ಪಿಗೆ: ಗೌರಿನಾಯ್ಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಶಿರಸಿ: ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ತಿಳಿದ ಅದೇ ಊರಿನ 55 ವರ್ಷದ ಮಹಿಳೆ ಗೌರಿ ನಾಯ್ಕ್ ರವರು ಯಾರ ಸಹಾಯವಿಲ್ಲದೆ ಅಂಗನವಾಡಿ ಆವರಣದಲ್ಲಿ ಬಾವಿಯನ್ನು ತೆಗೆಯಲು ಆರಂಭಿಸಿ ಅವಳ ಕಾರ್ಯ ಕ್ಕೆ ಇಲಾಖೆ ಅಧಿಕಾರಿಗಳು ಅಡಚಣೆ ಉಂಟುಮಾಡಿದ ಘಟನೆ ಸಿರ್ಸಿ ತಾಲೂಕಿನ ಹುತ್ಗಾರ್ ಗ್ರಾಮ ಪಂಚಾಯತಿಯ ಗಣೇಶನಗರದಲ್ಲಿ ನಡೆದಿದೆ.

ಗೌರಿ ನಾಯ್ಕ್ ರವರು ಕೆಲ ದಿನ ಕೆಲಸ ಮಾಡಿದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹುಲಿಗೆಮ್ಮ ಅವರು ಸಿ ಡಿ ಪಿ ಓ ವೀಣಾ ಸಿರ್ಸಿಕರ್ ಅವರಿಗೆ ಬಾವಿಯನ್ನು ಮುಚ್ಚಿಸುವಂತೆ ಆದೇಶವನ್ನು ಕಳುಹಿಸುತ್ತಾರೆ . ಅಧಿಕಾರಿಗಳ ಆದೇಶದಂತೆ ಮೇಲ್ವಿಚಾರಕಿ ಅನಿತಾ ಅವರು ಶಿಕ್ಷಕಿಗೆ ಸೂಚನೆ ನೀಡಿದ್ದು, ಈ ಸುದ್ದಿಯು ಊರಿನ ತುಂಬಾ ಕಾಡ್ಗಿಚ್ಚಿನಂತೆ ಹಬ್ಬುತ್ತದೆ.

ಇಡೀ ಊರಿಗೆ ಊರು ಹಾಗೂ ಜಿಲ್ಲೆಯ ಯಿಂದ ಜನರು ಬಂದು ಗೌರಿ ನಾಯ್ಕ್ ಸಹಾಯಕ್ಕೆ ನೀಲ್ಲುತ್ತಾರೆ. ಈ ಹಿಂದೆ ಗೌರಿ ನಾಯ್ಕ್ ಯಾರ ಸಹಾಯವಿಲ್ಲದೆ ಎರಡು ಬಾವಿಯನ್ನು ನಿರ್ಮಿಸಿ ಶೌರ್ಯ ಪ್ರಶಸ್ತಿಯನ್ನು ಸಹ ಪಡೆದಿರುತ್ತಾರೆ. ಇಲಾಖೆಯವರು ಹೇಳುವುದೇನೆಂದರೆ ಶಾಲೆಯ ಆವರಣದಲ್ಲಿ ಯಾರ ಅನುಮತಿಯು ಇಲ್ಲದೆ ಯಾವುದೇ ಸುರಕ್ಷತಾ ಕ್ರಮಗಳು ಅನುಸರಿಸದೆ ನಿರ್ಮಾಣ ಕಾರ್ಯ ಆರಂಭಿಸಿರುವುದು ಮಕ್ಕಳ ಹಿತ ದೃಷ್ಟಿಯಿಂದ ಕಾಮಗಾರಿ ನಿಲ್ಲಿಸಿ ಎಂದು ಹೇಳಿದ್ದೇವೆ ಎನ್ನುತ್ತಾರೆ.

ಚಿಕ್ಕ ಚಿಕ್ಕ ಮಕ್ಕಳು ಓಡಾಡುವ ಜಾಗವಾಗಿರುವುದರಿಂದ ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೆ ಬಾವಿ ತೆರೆದಿಟ್ಟಿರುವುದರಿಂದ ಇದು ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಇದೆ ಎನ್ನುವುದು ಇಲಾಖೆಯ ಮಾತಾಗಿದೆ ಅಲ್ಲದೆ ಒಂದು ಕೆಲಸವನ್ನು ಮಾಡುವಾಗ ಸಂಬoಧಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಸಾರ್ವಜನಿಕರು ಹೇಳುವುದೇನು ಸರಕಾರ, ಇಲಾಖೆ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಯಾರ ಸಹಾಯವಿಲ್ಲದೆ ಈ ಮಹಿಳೆ ಮಾಡುತ್ತಿರುವುದು ಶ್ಲಾಘನೀಯ ಅವರೆಲ್ಲರೂ ಸಹಕಾರವನ್ನು ನೀಡಬೇಕು ಅದು ಬಿಟ್ಟು ಮೇಲಾಧಿಕಾರಿಗಳು ಅಧಿಕಾರಿಗಳಿಗೆ ಮುಚ್ಚಿಸಿ ಎನ್ನುವಂತಹ ಆದೇಶ ನೀಡುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ, ಒಟ್ಟಿನಲ್ಲಿ ಉಗುರಿನಲ್ಲಿ ಹೋಗಬೇಕಾದ ವಿಷಯಕ್ಕೆ ಕೊಡಲಿ ಬಳಸಿದರು ಎನ್ನುವಂತಾಗಿದೆ.

ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜೀವ ಜಲಕಾರ್ಯ ಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೋಭಾ ನಾಯ್ಕ್ ನಾಡದೇವಿ ಹೋರಾಟ ವೇದಿಕೆ ಅನಿಲ್ ಕೊಠಾರಿ ಹಲವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿ ಕೆಲಸ ಮುಂದುವರಿಸುವAತೆ ಬೆನ್ನು ತಟ್ಟಿ ಪ್ರೋತ್ಸಾಹವನ್ನು ನೀಡಿದರು. ಅಲ್ಲದೆ ಶಾಲೆಗೆ ಬೇಕಾದಂತಹ ಕಾಂಪೌoಡ್ ಬಾವಿಗೆ ರಿಂಗ್ ಪಂಪ್ಸೆಟ್ ಟ್ಯಾಂಕ್ ಒದಗಿಸುವುದಾಗಿ ಭರವಸೆ ನೀಡಿದರು .

ನೀರಿಲ್ಲದೆ ಪರದಾಡುವ ಸ್ಥಿತಿಯಲ್ಲಿರುವುದನ್ನ ನಾನು ಕಣ್ಣಾರೆ ನೋಡುತ್ತಿದ್ದೇನೆ ಹಾಗಾಗಿ ನನ್ನ ಕೈಲಾದ ಸಹಾಯವನ್ನು ಮಾಡುವ ಇಚ್ಛೆ ಹೊಂದಿದ್ದು ಬಾವಿಯನ್ನು ತೆಗೆದಿದ್ದೇನೆ ಯಾರ ಸಹಾಯವು ನನಗೆ ಅಗತ್ಯವಿಲ್ಲ ನಾನು ನೀರು ಕೊಟ್ಟೆ ಕೊಡುತ್ತೇನೆ ನೀವು ನನಗೆ ಮಾನಸಿಕ ಧೈರ್ಯವನ್ನು ನೀಡಿ ನನ್ನ ಜೊತೆ ನಿಲ್ಲಿ ಎಂದು ಗೌರಿ ನಾಯ್ಕ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸಾರ್ವಜನಿಕ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ.

Exit mobile version