ಮಂಗನಕಾಯಿಲೆಗೆ ಮಹಿಳೆ ಬಲಿ: ಹೆಚ್ಚಿದ ಆತಂಕ

ಉತ್ತರಕನ್ನಡ: ಜಿಲ್ಲೆಯಲ್ಲಿ ಮಂಗನಕಾಯಿಲೆ ಆತಂಕ ದಿನೇ ದಿನೇ ಹೆಚ್ಚುತ್ತಿದೆ. ಹೌದು, ಇದೀಗ ಸಿದ್ದಾಪುರ ತಾಲೂಕಿನ ಜಿಡ್ಡಿ ಗ್ರಾಮದಲ್ಲಿ ಓರ್ವ ಮಹಿಳೆ ಮಂಗನಕಾಯಿಲೆಯಿoದ ಮೃತಪಟ್ಟಿದ್ದಾಳೆ. ಮಹಿಳೆಗೆ ಕೆಲ ದಿನಗಳ ಹಿಂದೆ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಬಳಿಕ ಆಕೆಯನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಅಲ್ಲಿ ಮಹಿಳೆ ಚೇತರಿಕೆ ಕಂಡಿದ್ದಳು. ಹೀಗಾಗಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಮತ್ತೆ ಸಮಸ್ಯೆ ಕಾಣುತ್ತಿದ್ದಂತೇ ಸಾಗರದ ಆದರ್ಶ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮತ್ತೀಗ ಏಕಾಏಕಿ ಕಾಯಿಲೆ ಕಾಣಿಸಿಕೊಂಡು ಮಹಿಳೆ ಮೃತಪಟ್ಟಿದ್ದಾಳೆ. ಇದುವರಗೆ ಸಿದ್ದಾಪುರದಲ್ಲಿ 43 ಮಂದಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕ ಪಡುವಂತಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version