ಬಾವಿಗೆ ಬಿದ್ದ ಆಕಳು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಿದ್ದಾಪುರ: ಆಕಸ್ಮಿಕವಾಗಿ ಕಾಲು ಜಾರಿ 20 ಅಡಿ ಆಳದ ಬಾವಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಸಂಜೆಯ ವೇಳೆಯಲ್ಲಿ ಕೊಂಡ್ಲಿ ಹತ್ತಿರದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 20 ಅಡಿ ಆಳದ 5 ಅಡಿ ಅಗಲದ ಗುಂಡಿಯಲ್ಲಿ ಆಕಳು ಸಿಲುಕಿ ಪ್ರಾಣಾಪಾಯದಲ್ಲಿತ್ತು , ಇದೆ ವೇಳೆ, ಆಕಳು 20 ಅಡಿ ಗುಂಡಿಯಲ್ಲಿ ಹೆಣ್ಣು ಕರು ಹಾಕಿದ್ದು ಅಗ್ನಿಶಾಮಕ ದಳ ದ ಸಿಬ್ಬಂದಿ ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಪ್ರಾಣ ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಾಸ್ತಿ ಗೊಂಡ, ದಿನೇಶಕುಮಾರ್, ಪ್ರಮೋದ್, ಕಿರಣಕುಮಾರ್, ಅಶೋಕ್ ,ವಾಸದೇವ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಕ್ಷಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version