ಹವ್ಯಾಸಿ ಕಲಾವಿದರಿಂದ “ಸ್ನೇಹ ಬಂಧನ” ನಾಟಕ: ಕಲಾಭಿಮಾನಿಗಳ ಮೆಚ್ಚುಗೆ

ಹೊನ್ನಾವರ: ತಾಲೂಕಿನ ದುರ್ಗಾಕೇರಿಯಲ್ಲಿ ಶ್ರೀ ದಂಡಿನದುರ್ಗಾದೇವಿಯ ವರ್ದಂತಿ ಉತ್ಸವದ ಅಂಗವಾಗಿ ರಾತ್ರಿ ಹವ್ಯಾಸಿ ಕಲಾವಿದರಿಂದ “ಸ್ನೇಹ ಬಂಧನ” ನಾಟಕ ಪ್ರದರ್ಶನಗೊಂಡಿತು. ಹೊನ್ನಾವರ ತಾಲೂಕಿನ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಒಂದಾದ ದಂಡಿನದುರ್ಗಾ ದೇವಿಯ ದೇವಾಲಯವು ಹೊನ್ನಾವರ ಪಟ್ಟಣದ ದುರ್ಗಾಕೇರಿಯಲ್ಲಿದೆ.ತನ್ನ ಅಪಾರ ಮಹಿಮೆ ಹಾಗೂ ಶಕ್ತಿಯಿಂದ ಈ ದುರ್ಗಾ ದೇವಿಯು, ಶೃದ್ದೆಯಿಂದ ಬರುವ ಭಕ್ತರ ಬಾಳನ್ನು ಬೆಳಗುತ್ತಾ, ದುಃಖದಿಂದ ಬರುವ ಭಕ್ತರ ಕಣ್ಣೀರನ್ನು ಒರೆಸುತ್ತಾ ಕರುಣಾಮಯಿಯಾಗಿದ್ದಾಳೆ. ದೇವಾಲಯದಲ್ಲಿ ವರ್ದಂತಿ ಉತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ಪೂಜೆ ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ರಾತ್ರಿ ಹವ್ಯಾಸಿ ಕಲಾವಿದರಿಂದ “ಸ್ನೇಹ ಬಂಧನ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು. ನಾಟಕ ರಂಗದ ಖ್ಯಾತ ಲೇಖಕರಾದ ದಿವಂಗತ ಮಾರುತಿ ಬಾಡಕರ್ ವಿರಚಿತ ಈ “ಸ್ನೇಹ ಬಂಧನ” ನಾಟಕವು ಹೃದಯಸ್ಪರ್ಶಿ ಕೌಟುಂಬಿಕ ಕಥೆಯನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಕಲಾವಿದರೆಲ್ಲ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version