ಗುಣವಂತೆ ಶಂಭುಲಿಂಗೇಶ್ವರನ ಸನ್ನಿದಿಯಲ್ಲಿ ಶಿವರಾತ್ರಿ: ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತರು
ಹೊನ್ನಾವರ: ಗುಣವಂತೆಯ ಶಂಭುಲಿಂಗೇಶ್ವರ ಅಭಿಷೇಕ ಪ್ರಿಯ. ದೇವರಿಗೆ ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿಇದೆ. ನೀರಿನ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳೆ ನೀರಿನ ಅಭಿಷೇಕ ಮುಂತಾದವುಗಳನ್ನು ಭಕ್ತರು ಹರಕೆಯಾಗಿ ಸಲ್ಲಿಸುತ್ತಾರೆ. ಮನೋಭಿಲಾಷೆಗಳ ಈಡೇರಿಕೆಗೆ ಅಭಿಷೇಕದ ಹರಕೆ ಸಲ್ಲಿಸುವ ಸಂಪ್ರದಾಯ ನಡೆದುಬಂದಿದೆ. ದೇವಾಲಯದ ಮುಂಭಾಗದಲ್ಲಿಕೊಳವಿದ್ದು ಇಲ್ಲಿಸ್ನಾನ ಮಾಡಿದರೆ ಚರ್ಮರೋಗ ಗುಣವಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.ಶಿವರಾತ್ರಿಯAದು ನಾನಾ ಭಾಗಳಿಂದ ಭಕ್ತರು ಆಗಮಿಸಿ ದೇವರಿಗೆ ಅಭಿಷೇಕ ಮಾಡಿ ಕೃತಾರ್ಥರಾಗುತ್ತಾರೆ.
ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ದೇವಸ್ಥಾನದ ಅರ್ಚಕರಾದ ಮಾದೇವ ಪಂಡಿತ ಮಾತನಾಡಿ ಇಂದು ಶಿವರಾತ್ರಿ ಹಿನ್ನಲೆಯಲ್ಲಿ ಪಂಚ ಕ್ಷೇತ್ರದಲ್ಲಿ ಒಂದಾದ ಗುಣವಂತೆಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ, ವಿಷೇಶ ಸೇವೆಗಳು, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಫಲ ಪಂಚಾಮೃತ, ಪತ್ರಾಭಿಷೇಕ ಭಸ್ಮಾಭಿಷೇಕ, ಜಪ, ಸೇರಿದಂತೆ ಇಂದು ಬೇಳಗಿನಜಾವದಿಂದ ರಾತ್ರಿ 10 ಘಟೆಯ ವರೆಗೆ ವಿನಿಯೋಗಗಳು ನಡೆದಿದೆ. ಪ್ರತಿವರ್ಷದಂತೆ ಈ ವರ್ಷವು ಭಕ್ತಾಧಿಗಳು ಆಗಮಿಸಿ ಸೇವೆ ಸಲ್ಲಿದ್ದಾರೆ ಎಂದರು,
ಸಮೀತಿಯ ಸದಸ್ಯರು ಯಕ್ಷಗಾನ ಕಲಾವಿದರು ಆಗಿರುವ ನಾಗರಾಜ ಭಂಡಾರಿ ಮಾತನಾಡಿ ಇಲ್ಲಿಗೆಬಂದ ಭಕ್ತರ ಇಷ್ಟಾರ್ತವನ್ನು ಈಡೇರುತ್ತವೆ. ಈ ಭಾರಿ ದೇವಾಲಯ ಶಿಲಾಮಯ ಗೋಳ್ಳುತ್ತದೆ ಇದು ನಮ್ಮ ಯೋಗ, ಆರ್ ಎನ್ ಶೆಟ್ಟಿಯವರ ಮಗನಾದ ಸುನೀಲ್ ಶೆಟ್ಟಿಯವರು ದೇವಸ್ಥಾನ ಕಟ್ಟಿಸಿ ಕೋಡುತ್ತೆನೆ ಎನ್ನುವ ನಿರ್ದಾರಹೋತ್ತು ಜಯರಾಮ ಅಡಿಗಳ ಮುಂದಾಳತ್ವದಲ್ಲಿ ಉರಿನವರ ಎಲ್ಲಾ ಸಹಾಯ ಸಹಕಾರದಿಂದ ಶಿಲಾಮಯ ಕಟ್ಟಡದ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ಅಭಿವೃದ್ದಿ ಸಮೀತಿಯ ಖಜಾಂಚಿ ಗೋವಿಂದ ಗೌಡ ಮಾತನಾಡಿ, ಆರ್ ಎನ್ ಶೆಟ್ಟಿಯವರ ಎರಡನೆಯ ಪುತ್ರರಾದ ಸುನೀಲ್ ಶೆಟ್ಟಿಯವರು ಈ ದೇವಾಲಯದ ಶಿಲಾಮಯ ಕಟ್ಟಡ ಮತ್ತು ತಾಮ್ರ ಹೋದಿಕೆ ಮಾಡಿಕೋಡುವ ದೃಡ ಸಂಕಲ್ಪ ಕೈಗೋಂಡಿದಾರೆ, ಈ ಗಾಗಲೆ ಬರದಿಂದ ಕೆಲಸಗಳು ಸಾಗುತ್ತಿದೆ, ಇದನ್ನು ಕಣ್ಣತುಂಬಿಕೋಳ್ಳುವ ಭಾಗ್ಯ ನಮ್ಮದಾಗಿದೆ ಎಂದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ