ಕಾರವಾರ: ಹೊರರಾಜ್ಯದ ಕಾರ್ಮಿಕರ ತಾತ್ಕಾಲಿಕ ವಸತಿ ಉದ್ದೇಶದಿಂದ ನಿರ್ಮಿಸಲಾಗಿದ್ದ ವಸತಿ ಸಮುಚ್ಚಯ ಮಾದರಿಯ ಶೆಡ್ ಒಂದರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟವಾಯಿತು ಎನ್ನಲಾಗಿದ್ದು, ಮೂರ್ನಾಲ್ಕು ಶೆಡ್ಡುಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ ಕಾರವಾರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸೀಬರ್ಡ್ ನೌಕಾನೆಲೆ ವ್ಯಾಪ್ತಿಯ ಮುದಗಾ ಪ್ರದೇಶದಲ್ಲಿ ರವಿವಾರ ಆಕಸ್ಮಿಕ ಬೆಂಕಿ ಅವಘಡಸಂಭವಿಸಿದೆ.
ಹೊರ ರಾಜ್ಯದ ಸುಮಾರು ನಾಲ್ಕು ನೂರು ಕಾರ್ಮಿಕರ ತಾತ್ಕಾಲಿಕ ವಸತಿಗಾಗಿ ಇಲ್ಲಿ ವಸತಿ ಸಮುಚ್ಚಯ ಮಾದರಿಯ ನೂರಾರು ಶೆಡ್ ನಿರ್ಮಿಸಲಾಗಿತ್ತು ಅವುಗಳ ಪೈಕಿ ಒಂದು ಶೆಡ್ ನಲ್ಲಿ ಅದಾವುದೋ ಕಾರಣದಿಂದ ಅಡುಗೆ ಅನಿಲ ಸಿಲೆಂಡರ್ ಗೆ ಬೆಂಕಿ ಹೊತ್ತಿಕೊಂಡು ಸ್ಪೋಟಗೊಂಡ ಪರಿಣಾಮ ಶೆಡ್ಡಿನ ಮೇಲ್ಛಾವಣಿ ಹಾರಿ ಹೋಗಿದ್ದು ಅಕ್ಕ ಪಕ್ಕದ ಮೂರು ನಾಲ್ಕು ಶೆಡ್ಡುಗಳಿಗೆ ಬೆಂಕಿ ಆವರಸಿಕೊಂಡಿತು ಎನ್ನಲಾಗಿದೆ.
ಒಮ್ಮೇಲೆ ಕೇಳಿ ಬಂದ ಆಕಸ್ಮಿಕ ಸ್ಪೋಟದ ಸದ್ದು ಕೇಳಿ, ಅಕ್ಕ ಪಕ್ಷದ ಶೆಡ್ಡಿನಲ್ಲಿ ಮಲಗಿದ್ದ ಕಾರ್ಮಿಕರು ಆತಂಕದಿಂದ ಹೊರ ಓಡಿ ಬಂದು ನೋಡುವಷ್ಟರಲ್ಲಿ ಬೆಂಕಿ ಜ್ವಾಲೆ, ದಟ್ಟ ಧೂಮ ಅಲ್ಲಲ್ಲಿ ಕಂಡು ಬಂದಿದೆ. ಸುದ್ದಿ ತಿಳಿದ ಕಾರವಾರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯ ರಕ್ಷಣಾ ಪಡೆ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ಕೈಗೊಂಡು, ಸಂಭವನೀಯ ಹೆಚ್ಚಿನ ಅನಾಹುತ ಮತ್ತು ಹಾನಿ ತಪ್ಪಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅದೃಷ್ಟವಶಾತ್ ನೂರಾರು ಶೆಡ್ ಗಳಲ್ಲಿ 300 ರಿಂದ 400 ಗುತ್ತಿಗೆ ಕಾರ್ಮಿಕರಿದ್ದರೂ ಯಾವುದೇ ಪ್ರಾಣಪಾಯವಿಲ್ಲದೇ ಅಗ್ನಿ ಅವಘಡದಿಂದ ಪಾರಾಗಿದ್ದಾರೆ.
ಈ ಹಿಂದೆಯೂ ಸಹ ಇಲ್ಲಿನ ಕಾರ್ಮಿಕರ ಶೆಡ್ಡಿನಲ್ಲಿ ಸಿಲಿಂಡರ್ ಸಿಡಿದು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿತ್ತು ಎನ್ನಲಾಗಿದ್ದು, ಕಾರ್ಮಿಕರ ಮತ್ತಿತರರ ಪ್ರಾಣ ರಕ್ಷಣೆ ಮತ್ತು ಅಲ್ಲಿನ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತು ಮತ್ತೆ ಇಂತಹ ದುರ್ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ