ಬಿಸಿಲ ಬೇಗೆ ಹೆಚ್ಚಳ: ಬಾಯಾರಿಕೆ ನೀಗಿಸಿಕೊಳ್ಳಲು ಎಳನೀರಿನ ಮೊರೆ ಹೋದ ಸಾರ್ವಜನಿಕರು
ಕಬ್ಬಿನ ಹಾಲು, ಕಲ್ಲಂಗಡಿಗೂ ಬೇಡಿಕೆ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆಯ ಪ್ರಾರಂಭವೇ ಅತ್ಯಂತ ಬಿಸಿಲಿನ ವಾತಾವರಣದಿಂದ ಕೂಡಿದ್ದು, ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಬೇಸಿಗೆಯ ಪ್ರಾರಂಭದಲ್ಲಿಯೇ ಬಿಸಿಲ ಬೇಗೆಗೆ ತತ್ತರಿಸಿಹೊಗಿದ್ದು, ಇನ್ನು ಏಪ್ರಿಲ್ ಮೇ ತಿಂಗಳು ಯಾವ ರೀತಿ ಇರಲಿದೆ ಎಂದು ಕಾದುನೋಡಬೇಕಿದೆ.
ಸೂರ್ಯನ ತಾಪಮಾನಕ್ಕೆ ಕಂಗಾಲಾಗಿರುವ ಸಾರ್ವಜನಿಕರು ಬಾಯಾರಿಕೆ ನೀಗಿಸಲು ಎಳನೀರು, ತಂಪು ಪಾನಿಯ, ಕಬ್ಬಿನ ಹಾಲು, ಕಲ್ಲಂಗಡಿ ಮುಂತಾದವುಗಳ ಮೊರೆ ಹೊಗುತ್ತಿದ್ದು, ಅದೇ ರೀತಿ ಕುಮಟಾ ಪಟ್ಟಣದಲ್ಲಿಯೂ ಸಹ ಸಾರ್ವಜಿನಿಕರು ಬಾಯಾರಿಕೆ ನೀಗಿಸಲು ತಂಪು ಪಾನಿಯ, ಎಳನೀರು, ಕಬ್ಬಿನ ಹಾಲಿನ ಅಂಗಡಿ ಸೇರಿದಂತೆ ಹಣ್ಣು ಹಂಪಲು, ಐಸ್ಕ್ರೀಮ್ ಅಂಗಡಿಗಳ ಎದುರು ಮುಗಿಬೀಳುತ್ತಿರುವ ದೃಷ್ಯ ಕಂಡು ಬರುತ್ತಿದೆ.
ಕುಮಟಾ ಪಟ್ಟಣದ ಗಿಬ್ ಸರ್ಕಲ್, ಹೆಗಡೆ ಕ್ರಾಸ್, ಮಾಸ್ತಿ ಕಟ್ಟೆ ಮುಂತಾದ ಭಾಗಗಳಲ್ಲಿ ಕಲ್ಲಂಗಡಿ ಹಣ್ಣು, ಎಳನೀರು, ಕಬ್ಬಿನ ಹಾಲುಗಳ ವ್ಯಾಪಾರ ಜೋರಾಗಿರುವ ದೃಷ್ಯ ಕಂಡು ಬಂದಿದೆ. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಈ ಬಾರಿ ಮಳೆಯ ಪ್ರಮಾಣವು ಕೂಡ ಕಡಿಮೆ ಇರುವ ಕಾರಣ ಬೇಸಿಗೆ ಪ್ರಾರಂಭವೇ ಅತಿಯಾದ ಶೆಕೆಯಿಂದ ಕೂಡಿದೆ. ಅತಿಯಾದ ಶೆಕೆಯ ಹಿನ್ನೆಲೆ ಬಾಯಾರಿಕೆ ನೀಗಿಸಲು ಸಾರ್ವಜನಿಕರು ತಂಪು ಪಾನಿಯಗಳ ಮೊರೆ ಹೊಗುತ್ತಿದ್ದಾರೆ.
ಬಿಸಿಲಿನ ಝಳಕ್ಕೆ ತತ್ತರಿಸಿರುವ ಜನರು ಎಳನೀರು ಸೇವಿಸಿದರೆ ಇನ್ನು ಹಲವರು ಕಲ್ಲಂಗಡಿ, ಇನ್ನಿತರ ಹಣ್ಣು ಹಂಪಲುಗಳ ಅಂಗಡಿಗೆ ಲಗ್ಗೆ ಇಡುವ ದೃಷ್ಯಗಳು ಕಂಡು ಬರುತ್ತಿದೆ. ಒಟ್ಟಿನಲ್ಲಿ ಈ ವರ್ಷ ಕೆಂಡವೇ ಮೈಮೇಲೆ ಸುರಿದುಕೊಂಡAತ ಉರಿ ಬಿಸಿಲಿನ ತಾಪ ಎಲ್ಲರನ್ನು ಪರದಾಡುವಂತೆ ಮಾಡುತ್ತಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ