ಕೋಳಿಅಂಕ, ಕುಟಕುಟಿಯ ಅಡ್ಡ! ದೇವಸ್ಥಾನ ಪಕ್ಕದ ಗುಡ್ಡದ ಮೇಲೆ ನಡೀತಿದೆ ಅಕ್ರಮ ಚಟುವಟಿಕೆ

ಹೊನ್ನಾವರ : ತಾಲೂಕಿನ ವಂದೂರು, ಅರೇಅಂಗಡಿ, ಕಡ್ನೀರ್ ಜಲವಳ್ಳಿ ಸೇರಿದಂತೆ ತಾಲೂಕಿನ ವಿವಿಧ ಭಾಗದಲ್ಲಿ ಅಕ್ರಮವಾಗಿ ಕೋಳಿಪಡೆ ಕುಟಕುಟಿ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಆದರೆ ಆ ರೀತಿಯ ಯಾವುದೆ ಅಕ್ರಮಗಳು ನಡೆಯುತ್ತಿಲ್ಲ ದಾಖಲೆ ನೀಡುವಂತೆ ಇಲಾಖೆ ಹಾಗೂ ರಾಜಕೀಯ ನಾಯಕರು ಸಮಜಾಯಿಸಿ ನೀಡುವ ಮೂಲಕ ಪರೋಕ್ಷವಾಗಿ ಅಕ್ರಮಕೊರರ ಬೆಂಬಲಕ್ಕೆ ನಿಲ್ಲುತ್ತಿದ್ದರು. ಇದೀಗ   ಕರ್ಕಿ ಸಮೀಪದ ದಲ್ಲಿರುವ ಮೂಡುಗಣಪತಿ ದೇವಸ್ಥಾನ ಪಕ್ಕದ ಗುಡ್ಡದ ಮೇಲೆ ನಡೆದ ಅಕ್ರಮ ಚಟುವಟಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಪೋಲಿಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. 

ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಅಕ್ರಮ ಚಟುವಟಿಕೆ ಮಟ್ಟ ಹಾಕಲು ಬೀಟ್ ಪೋಲೀಸದ ವ್ಯವಸ್ಥೆ ಸುಸಜ್ಜಿತವಾಗಿದೆ. ತಾಲೂಕ ಪೊಲೀಸ್ ಅಧಿಕಾರಿಗಳು ಸನ್ನದ್ದರಾಗಿದ್ದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಿದ್ದರು. ಪ್ರತಿ ವರ್ಷ ಎಸ್.ಪಿಯವರು ಜನಸ್ಪಂದನಾ ಸಭೆಯಲ್ಲಿ ಅಕ್ರಮವನ್ನು ಮಟ್ಟ ಹಾಕುತ್ತೇವೆ ಧೈರ್ಯವಾಗಿ ಮಾಹಿತಿ ನೀಡಿ ಎನ್ನುತ್ತಿದ್ದರು.

ಆದರೆ ಬೀಟ ಪೋಲಿಸರಿಗೆ ಮಾಹಿತಿ ನೀಡಿದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ನೇರವಾಗಿ ಮಾಹಿತಿ ನೀಡಿದವರ ಹೆಸರು ಹೇಳುತ್ತಿದ್ದರು. ಇದರಿಂದ ಅಕ್ರಮಕೋರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಇದನ್ನು ಅರಿತು ಹಲವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿರಲಿಲ್ಲ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಕೋಳಿಪಡೆ, ಕುಟಿಕುಟಿ , ಅಂದರಬಾಹರ್ ನಡೆಯುತ್ತಿರುವ ಮೊಬೈಲ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಸರಿಸುಮಾರು ಸಾವಿರಾರು ಸಂಖ್ಯೆ ಜನರು, ನೂರಾರು ಬೈಕ್, ಹತ್ತಾರು ಕಾರುಗಳು, ಐಸ್ಕ್ರೀಂ, ಪಾನಬೀಡಾ, ನೀರಿನ ಬಾಟಲಿ ಅಂಗಡಿಗಳನ್ನು ತಾತ್ಕಲಿಕವಾಗಿ ಹಾಕುವ ಮೂಲಕ ವ್ಯವಸ್ಥೆ ಕಲ್ಪಿಸಿಲಾಗಿತ್ತು. ಈ ಗುಡ್ಡದ ಮೇಲೆ ಈ ಪ್ರಮಾಣದ ವ್ಯವಸ್ಥೆ ಕಲ್ಪಿಸಿ ಅಕ್ರಮ ಚಟುವಟಿಕೆ ನಡೆದರೂ ಬೀಟ್ ಪೊಲೀಸರ ಗಮನಕ್ಕೆ ಬರದೆ ಇರುವುದು ಇಲಾಖೆಯೆ ವೈಪಲ್ಯ ಎಂದರೂ ತಪ್ಪಿಲ್ಲ. 

ಈ ಪ್ರಮಾಣದಲ್ಲಿ ಅಕ್ರಮ ಚಟುವಟಿಕೆ ಪೊಲೀಸ್ ಕೃಪಾಕಟಾಕ್ಷವಿಲ್ಲದೆ ನಡೆಯುದು ಅಸಾಧ್ಯ. ಕೆಲ ವರ್ಷದ ಹಿಂದೆ ವಾಹನ ಕೀ.ಮೀಟರ್ ದೂರ ಇಟ್ಟು ಗುಡ್ಡಗಾಡು ಭಾಗದಲ್ಲಿ ನಡೆಯುತ್ತಿದ್ದ ಈ ದಂದೆಯು, ಇದೀಗ ಘಟನೆ ನಡೆಯುವ ಸ್ಥಳದಲ್ಲಿ ನೂರಾರು ವಾಹನಗಳ ಸರತಿ ಸಾಲಿನಲ್ಲಿ ಅಂಗಡಿ ಅಳವಡಿಸಿ ಆಟ ನಡೆಸಲಾಗುತ್ತಿದೆ. ಇಲಾಖೆಯ ಕೃಪಕಟಾಕ್ಷವಿದೆ ಎಂಬ ಆರೊಪ‌ಕೇಳಿಬರುತ್ತಿದೆ.

ವಿಸ್ಮಯ ನ್ಯೂಸ್‌ಶ್ರೀಧರ್‌ನಾಯ್ಕ ಹೊನ್ನಾವರ

Exit mobile version