ಭಟ್ಕಳವನ್ನು ಬೆಚ್ಚಿಬೀಳಿಸಿದ್ದ ಕೊಲೆಪ್ರಕರಣ: 8 ಆರೋಪಿಗಳು ವಶಕ್ಕೆ

ಭಟ್ಕಳ: ತಾಲೂಕಿನ ಬೆಣಂದೂರು ಗ್ರಾಮದ ವ್ಯಕ್ತಿಯೊರ್ವನನ್ನು ಹಾಡು ಹಗಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬoಧಿಸಿದoತೆ ಭಟ್ಕಳ ಪೊಲೀಸರು 8 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಸೋಮವಾರ ನಡೆದಿದೆ. ಬೆಣಂದೂರು ನಿವಾಸಿ ಪದ್ಮಯ್ಯ ಜಟ್ಟಾ ನಾಯ್ಕ(44) ಅವರನ್ನು ಅಗಸ್ಟ್ 14 ರಂದು ಹಾಡು ಹಗಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಣಂದೂರು ನಿವಾಸಿ ಜಯಂತ ಬಲೀಂದ್ರ ನಾಯ್ಕ, ಮಂಜುನಾಥ ಬಲೀಂದ್ರ ನಾಯ್ಕ, ದೇವೇಂದ್ರ ಬಲೀಂದ್ರ ನಾಯ್ಕ, ಸುಬ್ರಹ್ಮಣ್ಯ ಬಲೀಂದ್ರ ನಾಯ್ಕ, ಬಲೀಂದ್ರ ಹೊನ್ನಪ್ಪ ನಾಯ್ಕ, ಮಹೇಶ ಜಟ್ಟಪ್ಪ ನಾಯ್ಕ, ಸುರೇಶ ಮಾದೇವ ನಾಯ್ಕ, ಸುನೀಲ್ ಮಾದೇವ ನಾಯ್ಕ ಇವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒರ್ವ ಕೋವಿಡ್ ಸೋಂಕಿತನಾಗಿದ್ದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿತರ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಪೋಲಿಸ ಅಧೀಕ್ಷಕ ಶಿವಪ್ರಕಾಶ ದೇವರಾಯ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್ ಮಾರ್ಗದರ್ಶನದಲ್ಲಿ ಎಎಸ್ಪಿ ನಿಖಿಲ್ ಬಿ, ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡ ರಚಿಸಲಾಗಿತ್ತು. ತಂಡದ ಉಸ್ತುವಾರಿಯನ್ನು ಸಿ.ಪಿ.ಐ ದಿವಾಕರ ಪಿ. ವಹಿಸಿದ್ದರು.

ಒಂದು ತಂಡವನ್ನು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಾಗೂ ಇನ್ನೊಂದು ತಂಡವನ್ನು ಬೆಳಗಾವಿಯ ಗೋಕಾಕ ತಾಲೂಕಿನ ಮೂಡಲಗಿಗೆ ಹಾಗೂ ಮೂರನೇ ತಂಡ ಭಟ್ಕಳದಲ್ಲಿ ಕಾರ್ಯಚರಣೆ ನಡೆಸಿ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತ ವಿಡಿಯೋ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಬಂಧಿಸಿದ ಆರೋಪಿಗಳಿಂದ ಪೊಲೀಸರು ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, ಬಡಿಗೆ, ಕಬ್ಬಿಣದ ರಾಡ್ಗಳನ್ನು ಜಪ್ತಿ ಮಾಡಿ ವಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಓಂಕಾರಪ್ಪ, ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಭರತಕುಮಾರ ವಿ, ಹೆಚ್.ಐ ಕುಡಗುಂಟಿ, ಹೊನ್ನಾವರ ಠಾಣೆಯ ಪಿ.ಎಸ್.ಐ ಅಶೋಕಕುಮಾರ, ಕುಮಟಾ ವಿ.ಎಸ್.ಐ ರವಿ ಗುಡ್ಡಿ, ಭಟ್ಕಳ ಗ್ರಾಮೀಣ ಠಾಣೆಯ ಮುರ್ಡೇಶ್ವರ ಮೊಲೀಸಠಾಣೆಯ ಪಿ.ಎಸ್.ಐ ರವೀಂದ್ರ ಬಿರಾದಾರ, ಎ.ಎಸ್.ಐ ಮಂಜುನಾಥ ಗೌಡರ್, ಮುಂತಾದವರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version