ಮಾಹಿತಿ
Trending

ಅಂಕೋಲಾದಲ್ಲಿಂದು 5 ಕೇಸ್ : ಮೂರು ಐ.ಎಲ್.ಐ. : 29 ಸಕ್ರೀಯ

[sliders_pack id=”3491″]

ಅಂಕೋಲಾ : ತಾಲೂಕಿನಲ್ಲಿ ಸೋಮವಾರ 5 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಅಚವೆಯಲ್ಲಿ 3, ಹುಲಿದೇವರವಾಡ ಮತ್ತು ಸೂರ್ವೆಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಇಂದಿನ ಒಟ್ಟೂ 5 ಪ್ರಕರಣಗಳಲ್ಲಿ 2 ಪ್ರಕರಣಗಳು ಈ ಹಿಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿರುವ ಸಾಧ್ಯತೆಗಳಿದ್ದು, ಉಳಿದ 3 ಪ್ರಕರಣಗಳಲ್ಲಿ ಜ್ವರ ಲಕ್ಷಣಗಳುಳ್ಳ (ಐ.ಎಲ್.ಐ) ಮಾದರಿ ಪಾಸಿಟಿವ್ ಲಕ್ಷಣಗಳಿವೆ ಎನ್ನಲಾಗಿದೆ.

ಈ ಮೂಲಕ ಒಟ್ಟೂ ಸಕ್ರೀಯ ಸೋಂಕಿನ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಹಾರವಾಡ, ಅಡ್ಲೂರು, ಕೊಡ್ಸಣಿ ಭಾಗಗಳಲ್ಲಿ ಒಟ್ಟೂ 92 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.
ಕರೊನಾ ವಾರಿಯರ್ಸಗಳ ನಿರಂತರ ಸೇವೆಯಿಂದ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಸೋಂಕಿತರನೇಕರು ಗುಣಮುಖರಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ತಾಲೂಕಿನ ಹಲವೆಡೆ ಅಲ್ಲಲ್ಲಿ ಹೊಸ ಕರೊನಾ ಕೇಸ್‍ಗಳು ದಾಖಲಾಗುತ್ತಿರುವುದು ಕೆಲ ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Related Articles

Back to top button