ಕುಮಟಾ: 108 ಸೀಮೆಗಳ ಒಡೆಯ, ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಶ್ರೀ ಹನುಮಂತ ದೇವರ ( Chandavar Hanumantha) ಮೂಲ ಮೂರ್ತಿಯ ಮರು ಪ್ರತಿಷ್ಠಾಪನಾ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಸಂಪನ್ನಗೊoಡಿದ್ದು, ಈ ಒಂದು 3 ದಿನಗಳ ವಿಜ್ರಂಭಣೆಯ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಭಾಗಳಿಂದ ಆಗಮಿಸಿದ ಭಕ್ತರು ಪವನಸುತನ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾದರು.
ಚಂದಾವರ ಶ್ರೀ ಹನುಮಂತ ದೇವರ ( Chandavar Hanumantha) ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಕೊನೆಯ ದಿನವಾದ ಇಂದು ದೇವಾಲಯದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊoಡಿತು. ಶ್ರೀ ದೇವರ ದರ್ಶನ ಪಡೆಯಲು ಸರಿ ಸುಮಾರು 1 ಲಕ್ಷದ ಸಮೀಪ ಬಕ್ತರು ಆಗಮಿಸಿದ್ದು, ಸರದಿ ಸಾಲಿನಲ್ಲಿ ನಿಂತು ಪುನರ್ ಪ್ರತಿಷ್ಠಾಪನೆಗೊಂಡ ಶ್ರೀ ಹನುಮನ ನೂತನ ಮೂರ್ತಿಯ ದರ್ಶನ ಪಡೆದು ಪುನೀತರಾದರು.
ಆಡಳಿತ ಮಂಡಿಳಿಯ ಅಚ್ಚುಕಟ್ಟಾದ ನಿರ್ವಹಣೆಯಿಂದಾಗಿ, ಸ್ವಯಂ ಸೇವರು ಹಾಗೂ ಊರ ನಾಗರಿಕರು ಹಾಗೂ ಸಮಸ್ತ ಭಕ್ತಾದಿಗಳ ಸಹಕಾರದಿಂದ ಯಾವುದೇ ರೀತಿಯ ತೊಂದರೆ ತೊಡಕುಗಳು ಉಂಟಾಗದೆ ಇರುವ ರೀತಿಯಲ್ಲಿ ಕಾರ್ಯಕ್ರಮ ಸಂಪನ್ನಗೊoಡಿತು. ಸರಿಸುಮಾರು 2 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸೇರಿದಂತೆ ಪೊಲೀಸ್ ಬಿಗಿ ಬಂದೋಬಸ್ತ್ನೊoದಿಗೆ ಪಾರ್ಕಿಂಗ್ ವ್ಯವಸ್ಥೆ, ಶ್ರೀ ದೇವರ ದರ್ಶನ ಹಾಗೂ ಅನ್ನ ಸಂತರ್ಪಣೆಯು ಸುರುಳಿತವಾಗಿ ನಡೆಯಿತು.
ಈ ವೇಳೆ ಶ್ರೀ ಹನುಮಂತನ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ಬಳಿಕ ಅನ್ನಸಂತರ್ಪಣೆಯಲ್ಲಿ ಸ್ವತಃ ತಾವೇ ಪಾಲ್ಗೊಂಡು ಭಕ್ತಾದಿಗಳಿಗೆ ಪ್ರಸಾದ ವಿತರಿಸಿದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಚಂದಾವರದ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿದೆ. ಆಡಳಿತ ಮಂಡಳಿ, ಊರ ನಾಗರಿಕರು, ಸಮಸ್ತ ಭಕ್ತಾಧಿಗಳ ಶ್ರಮದಿಂದಾಗಿ ಅತ್ಯಂತ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಭಾಸ್ಕರ ಚಂದಾವರ ಅವರು ಮಾತನಾಡಿ, 3 ದಿನಗಳ ಕಾಲ ಅತ್ಯಂತ ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಕರಿಗೆ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವ್ಯವಸ್ಥೆಗಳ ಕುರಿತು ವಿವರಣೆ ನೀಡಿದರು. ಈ ವೇಳೆ ಸ್ವಯಂ ಸೇವಕರೋರ್ವರು ಮಾತನಾಡಿ, ಶ್ರೀ ದೇವರ ಆಶೀರ್ವಾದ ಹಾಗೂ 3 ತಿಂಗಳುಗಳ ಸತತ ಪರಿಶ್ರಮದ ಫಲವಾಗಿ ಇಂದು ಇಂತಹ ಅತ್ಯಂತ ಅದ್ದೂರಿಯಾದ ಕಾರ್ಯಕ್ರಮ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ