ಬೈಕಿಗೆ ಡಿಕ್ಕಿಹೊಡೆದ ಲಾರಿ: ನೆಲಕ್ಕೆ ಬಿದ್ದ ಮಹಿಳೆ ಸಾವು

ಶಿರಸಿ: ಲಾರಿ ಡಿಕ್ಕಿಯಾಗಿ ಮಹಿಳೆಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಮಿರ್ಜಾನಕರ್ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.
ವಿಜಯಾ ಭೋವಿ( 56) ಮೃತಪಟ್ಟ ದುರ್ದೈವಿ. ಮಂಜುನಾಥ ಮೊಗೇರ ಎಂಬಾತನು ಲಾರಿಯನ್ನು ಶಿವಾಜಿ ಚೌಕ ಕಡೆಯಿಂದ ಕೊಟೆಕರೆ ಕಡೆಗೆ ಅತೀ ವೇಗವಾಗಿ ಹಾಗೂ ನಿಷ್ಕಾಳಜಿ ತನದಿಂದ ಚಲಾಯಿಸಿ ಕೊಂಡು ಬಂದು ಕಾಮತ್ ಹೋಟೆಲ್ ಕ್ರಾಸ್ ಹತ್ತಿರ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿ‌ಸಿದ್ದಾನೆ.

ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ವಿಜಯಾ ಭೋವಿ ಯವರು ನೆಲಕ್ಕೆ ಬಿದ್ದಿದ್ದಾರೆ. ಇವರ ಮೇಲೆ ಲಾರಿಯ ಬಲಬದಿಯ ಹಿಂದಿನ ಚಕ್ರ ಹತ್ತಿ ಹೋಗಿದೆ. ಪರಿಣಾಮ ವಿಜಯಾ ಭೋವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಿರಸಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version