ಕುಮಟಾ: ಪಟ್ಟಣದ ರಾಷ್ಟಿçÃಯ ಹೆದ್ದಾರಿ 66ರ ಎಲ್.ಐ.ಸಿ ಕಚೇರಿ ಬಳಿಯ ಗಣಪತಿ ಮಡಿವಾಳ ಮಾಲೀಕತ್ವದ ಮಂದಾರ ಇಲೈಟ್‌ನಲ್ಲಿ ಸಂತೋಷ್, ಸುಧಾಕರ್, ಗಿರೀಶ್ ಹಾಗೂ ರಾಜೇಶ ಇವರ ಮಾಲೀಕತ್ವದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬ್ರೌನ್ ವುಡ್ ಶೋ ರೂಮ್ ನ ಉದ್ಘಾಟನಾ ಸಮಾರಂಭವು ಇಂದು ನೆರವೇರಿತು. ಈ ಒಂದು ನೂತನ ಮಳಿಗೆಯನ್ನು ಶ್ರೀ ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಯುಗಾದಿಯ ಶುಭದಿನದಂದು ಬ್ರೌನ್ ವುಡ್ ಶೋ ರೂಮ್ ಆರಂಭವಾಗಿರುವುದು ಖುಷಿಯ ಸಂಗತಿ. ದೇಶ ಸೇವೆ ಮಾಡಿದ ಗಣಪತಿ ಮಡಿವಾಳ ಅವರಿಗೆ ಉದ್ಯಮ ಕ್ಷೇತ್ರದಲ್ಲೂ ಯಶಸ್ಸು ದೊರೆಯಲಿ. ಯಾವುದೇ ಉದ್ಯಮ ಆರಂಭಿಸಲು ಶ್ರಮ ಮತ್ತು ದೃಢ ಸಂಕಲ್ಪವಿರಬೇಕು. ಹಾಗಾದರೆ ಮಾತ್ರ ಯಶಸ್ಸು ಸಾಧ್ಯ. ಅಂತ ದೃಢ ಸಂಕಲ್ಪವಿರುವ ಈ ಯುವಕರು ಕೈಗೊಂಡ ಕಾರ್ಯ ಫಲಪ್ರದವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕುಮಟಾ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ರಾಜೇಶ ಮಡಿವಾಳ ಮಾತನಾಡಿ, ಮನುಷ್ಯ ಕಷ್ಟಪಟ್ಟರೆ ಒಳ್ಳೆಯ ಸ್ಥಾನಕ್ಕೇರಲು ಸಾಧ್ಯ. ಅದಕ್ಕೆ ನನ್ನ ಸಹೋದರ ಗಣಪತಿ ಮಡಿವಾಳ ಸಾಕ್ಷಿ. ಬ್ರೌನ್ ವುಡ್ ಸಂಸ್ಥೆಯಿoದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಾಮಗ್ರಿ ದೊರೆಯುವ ಮೂಲಕ ಸಂಸ್ಥೆಯ ಉದ್ಯಮ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ವೇಳೆ ಕುಮಟಾ ಪುರಸಭೆ ಮುಖ್ಯಾಧಿಕಾರಿಗಳಾದ ವಿದ್ಯಾಧರ ಕಲಾದಗಿ ಅವರು ಮಾತನಾಡಿ, ಕುಮಟಾದಲ್ಲಿ ನೂತನ ಶಾಖೆ ಆರಂಭಿಸಿದ ಎ.ಜೆ.ಎಸ್.ಆರ್ ಎಂಟ್ರಪ್ರೆöÊಸ್ಸ್ ನ ಬ್ರೌನ್ ವುಡ್ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವ ಜೊತೆಗೆ ಕುಮಟಾದ ಜನತೆಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಹಾಗೂ ಮಂದಾರ ಇಲೈಟ್‌ನ ಮಾಲೀಕರಾದ ಗಣಪತಿ ಮಡಿವಾಳ ಅವರು ಮಾತನಾಡಿ, ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ನನ್ನ ಕನಸು ಇಂದು ಪುಟ್ಟ ಹೆಜ್ಜೆಯ ಮೂಲಕ ಪ್ರಾರಂಭಗೊoಡಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಗಣೆಶ ಗಾಂವಕರ್, ವಿಠ್ಠಲ್ ನಾಯಕ, ರಾಮಚಂದ್ರ ಮಡಿವಾಳ, ರಮಾ ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಮಟಾದಲ್ಲಿ ನೂರನವಾಗಿ ಶುಭಾರಂಭಗೊOಡ ಬ್ರೌನ್ ವುಡ್ ಶೋ ರೂಮ್‌ನಲ್ಲಿ ಫನಿರ‍್ಸ್, ಇಂಟೀರರ‍್ಸ್, ಕರ್ಟೈನ್ಸ್, ವಾಲ್‌ಪೇಪರ್, ಎಲೆಕ್ಟಾçನಿಕ್ಸ್, ಹೋಂ ಅಪ್ಲೆöÊಯನ್ಸಸ್ ಸೇರಿದಂತೆ ವಿವಿಧ ಆಕರ್ಷಕ ವಸ್ತುಗಳನ್ನು ಡಿಸ್ಕೌಂಟ್ ಹಾಗೂ ರಿಯಾಯಿತಿ ದರದಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಮನೆ, ಕಚೇರಿ, ವಾಣಿಜ್ಯ ಮಳಿಗೆಗಳಿಗೆ ಅಗತ್ಯವಾದ ಪಿಠೋಪಕರಣಗಳು, ಗೃಹಬಳಕೆ ಸಾಮಗ್ರಿಗಳನ್ನು ಬ್ರೌನ್ ವುಡ್ ಶೋ ರೂಮ್‌ನಲ್ಲಿ ಖರೀದಿಸುವ ಮೂಲಕ ಸಹಕಾರ ನೀಡಬೇಕೆಂದು ಬ್ರೌನ್ ವುಡ್ ಗ್ರೂಪ್ಸ್ ವಿನಂತಿಸಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ