ನೀಲಗೋಡ ಯಕ್ಷೀ ಚೌಡೇಶ್ವರಿ ಜಾತ್ರೆ ಸಂಪನ್ನ: ರಥ ಎಳೆದು ಪುನೀತರಾದ ಭಕ್ತರು
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ದೇವರ ದರ್ಶನ
ಹೊನ್ನಾವರ: ಕರ್ನಾಟಕ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಯಕ್ಷೀ ಚೌಡೇಶ್ವರಿ ಸನ್ನಿಧಿಯಲ್ಲಿ ನೀಲಗೋಡ ಜಾತ್ರೆ ಅತ್ಯಂತ ವಿಜೃಂಭಣೆಯಿoದ ದಾರ್ಮಿಕ ವಿಧಿ ವಿಧಾನದಂತೆ ನಡೆಯಿತು. ಜಾತ್ರಾ ಪ್ರಯುಕ್ತ ದೇವಾಲಯದಲ್ಲಿ ಶತ ಚಂಡಿಕಾಯಾಗ, ಶತ ರುದ್ರ ಹವನ,ಮುಂತಾದ ಕಾರ್ಯಕ್ರಮಗಳು ನೆರವೇರಿದವು. ಆಂದ್ರಪ್ರದೇಶದ ಶಾರದಾ ದತ್ತಪೀಠದ ವಿದ್ಯಾಭಿನವ ಸುಭ್ರಹ್ಮಣ್ಯ ಭಾರತಿ ಸ್ವಾಮಿಗಳು ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯಕ್ಕೆ ಆಗಮಿಸಿದ ಸ್ವಾಮಿಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು, ನಂತರ ಸ್ವಾಮೀಗಳು ದೇವಾಲಯದ ಯಕ್ಷಿ ಚೌಡೇಶ್ವರಿ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿದರು,
ದೇವಾಲಯದ ಭಕ್ತರು ಆಗಿರುವ ಸಮಾಜ ಸೇವಕ ಸುರಜ್ ನಾಯ್ಕ ಸೋನಿ ಕುಮಟಾ ಇವರನ್ನು ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರಜ್ ನಾಯ್ಕ ಸೋನಿ , ಮಾದೇವ ಸ್ವಾಮಿಯವರು ದೇವರ ಪ್ರೀತಿಗೆ ಪಾತ್ರರಾಗಿದಾರೆ, ತಮಗೆ ಸಿಕ್ಕ ಶಕ್ತಿಯನ್ನು ಅನೇಕ ಭಕ್ತಾಧಿಗಳಿಗೆ ದೇವರ ಮೂಲಕ ದಾರಿ ತೋರಿಸಿದಾರೆ, ಇಲ್ಲಿಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ., ತಾಯಿಯ ಶಕ್ತಿ ಅಪಾರ ಎಂದರು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಮಾತನಾಡಿ ರಾಮಾನಂದ ಅವದೂತರು ಮತ್ತು ಮಾರುತಿ ಗುರುಜಿಯವರ ಆಶಿರ್ವಾದದಿಂದ ಈ ಕ್ಷೇತ್ರ ಬೆಳದಿದೆ, ಗುರು ಕೊಟ್ಟಿರುವ ಆರ್ಶಿವಾದ ನಮ್ಮ ವಂಶ ಪರಂರೆಯವರೆಗೆ ಉಳಿಯುತ್ತದೆ, ಗುರುವಿಗೆ ನಮಸ್ಕರಿಸಿದಾಗ ದೇವರು ಒಳ್ಳೆಯದನ್ನು ಮಾಡುತ್ತಾನೆ, ರಥೋತ್ಸವದಲ್ಲಿ ತಾಯಿ ರಥದಲ್ಲಿ ಕುಳಿತು ಭಕ್ತರನ್ನು ಹರಸುತ್ತಿದ್ದಾಳೆ ಎಂದರು.
ಭಜನೆ ಕಾರ್ಯಕ್ರಮ ಮತು ಚಂಡೆ ಕಲಾವಿದರಿಂದ ಪಲ್ಲಕ್ಕಿ ಉತ್ಸವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಹಾಗೂ ವಾಣಿ ಗೌಡ ಇವರಿಂದ ಕಾಮಿಡಿ ಶೋ, ಟಿವಿ ವಾಹಿನಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆದವು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,