ಮಂಗನಕಾಯಿಲೆಯಿಂದ ಮತ್ತೊಂದು ಸಾವು: ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಸಿದ್ದಾಪುರ: ಕೆಎಫ್‌ಡಿ ಕಾಯಿಲಿಗೆ ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 63 ವರ್ಷದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ತಾಲೂಕಿನಲ್ಲಿ ಈ ವರ್ಷ ಇದುವರೆಗೆ ಒಟ್ಟೂ ಏಳು ಜನ ಮಂಗನಕಾಯಿಲೆಗೆ ಮೃತಪಟ್ಟಂತಾಗಿದೆ. ಕಳೆದ 15 ದಿನದಿಂದ ಮಂಗನಕಾಯಿಲೆಯಿoದ ಬಳಲುತ್ತಿದ್ದ ಈತ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ. ಕಾಯಿಲೆ ಉಲ್ಬಣಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿತ್ತು..ಆದರೆ, ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version