Big News
Trending

ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇವೆ ಮತ್ತೆ ಆರಂಭ

  • ಶಾಸಕ ದಿನಕರ ಶೆಟ್ಟಿಯವರ ನಿರಂತರ ಪ್ರಯತ್ನ
  • ಗರ್ಭಿಣಿಯರಿಗೆ ಉಚಿತವಾಗಿ ಸ್ಕ್ಯಾನಿಂಗ್
  • ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಕ್ಕೆ ಸಾಂಕೇತಿಕವಾಗಿ ಚಾಲನೆ

ಕುಮಟಾ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವು ಅನೇಕ ದಿನಗಳಿಂದ ನಿರ್ವಾಹಕರಿಲ್ಲದೆ ಚಾಲ್ತಿಯಲ್ಲಿಲ್ಲವಾಗಿತ್ತು. ಇದಿಗ ಶಾಸಕ ದಿನಕರ ಶೆಟ್ಟಿಯವರ ಪ್ರಯತ್ನದ ಫಲವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರದ ಸೇವೆ ಆರಂಭವಾಗಿದ್ದು, ಉಚಿತವಾಗಿ ಲಭ್ಯವಿದೆ. ಇದಿಗ ಶಿರಸಿ ಮೂಲದ ಡಾ. ಸತೀಶ ಎಂಬುವವರು ಕುಮಟಾ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರದ ಉಪಯೋಗವನ್ನು ಕುಮಟಾ ಜನತೆಗೆ ನಿಡಲು ಒಪ್ಪಿಕೊಂಡಿದ್ದು, ಇಂದು ಶಾಸಕರಾದ ದಿನಕರ ಶೆಟ್ಟಿಯವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಪಯೋಗವಾಗುವಂತಹ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಇದ್ದರೂ ಅದರ ಉಪಯೋಗ ಸಾರ್ವಜನಿಕರಿಗೆ ಸಿಗದಂತಾಗಿತ್ತು. ಈ ವಿಷಯ ನನ್ನ ಗಮನಕ್ಕೆ ಬಂದ ಕೂಡಲೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಹಾಗೂ ಡಿ.ಹೆಚ್.ಒ ರವರ ಬಳಿ ಅತಿ ಶೀಘ್ರವಾಗಿ ಇದರ ನಿರ್ವಾಹಕರ ವೈವಸ್ಥೆ ಮಾಡಬೇಕೆಂದು ಸೂಚಿಸಿದ್ದೆ. ಅದರಂತೆಯೆ ಶಿರಸಿಯ ಡಾ. ಸತೀಶ ಎಂಬುವವರು ಕುಮಟಾ ಸರಕಾರಿ ಆಸ್ಪತ್ರೆಗೆ ಬರಲು ಒಪ್ಪಿಗೆ ನೀಡಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಒಂದು ಯಂತ್ರದಲ್ಲಿ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲು ಖಾಸಗಿ ಆಸ್ಪತ್ರೆಗಳಲ್ಲಿ ಒಂದುವರೆ ಸಾವಿರಕ್ಕೂ ಅಧಿಕ ಹಣ ಬೇಕಾಗುತ್ತದೆ, ಆದರೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬಹುದು ಎಂದರು.

ಈ ಕುರಿತ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ

ಈ ಸಂದರ್ಭದಲ್ಲಿ ಕುಮಟಾ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಾದ ಡಾ. ಗಣೇಶ ನಾಯ್ಕ, ಡಾ. ಶ್ರೀನಿವಾಸ ನಾಯ್ಕ, ಡಾ. ಕೃಷ್ಣಾನಂದ ಭಟ್, ಡಾ. ಕೇಶವ್ ಭಟ್, ಡಾ. ಸದಾನಂದ ಪೈ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button